ಡಿ.ಕೆ.ಆರ್.ಡಿ.ಎಸ್: ಕೋವಿಡ್-19 ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ)  ಇದರ ನೇತೃತ್ವದಲ್ಲಿ ಸ್ನೇಹ ಸದನ ಚಾರಿಟೇಬಲ್ ಟ್ರಸ್ಟ್ ಇದರ ಸಹಾಯದೊಂದಿಗೆ ಸೈಂಟ್ ಮೇರಿಸ್ ಚರ್ಚ್ ಶಿರ್ಲಾಲು ಹಾಗೂ ಗ್ರಾಮ ಪಂಚಾಯತ್ ಶಿರ್ಲಾಲು ಇದರ ಸಹಕಾರದೊಂದಿಗೆ ಶಿರ್ಲಾಲು ಹಾಗೂ ಕರಂಬಾರು ಗ್ರಾಮದ ಕಡು ಬಡವರಿಗೆ, ಕ್ವಾರಂಟೈನ್‌ಗೆ ಒಳಗಾದ ಕುಟುಂಬದವರಿಗೆ ಮತ್ತು ವಿಶೇಷ ಚೇತನರಿಗೆ ಆಹಾರದ ಕಿಟ್ ವಿತರಣೆಯನ್ನು ಜು.24 ರಂದು ಗ್ರಾಮ ಪಂಚಾಯತ್ ಶಿರ್ಲಾಲು, ಸೈಂಟ್ ಮೇರಿಸ್ ಚರ್ಚ್ ಹಾಗೂ ಬಟ್ಯಾಲ್‌ಮಾರ್ ಅಂಗನವಾಡಿಯಲ್ಲಿ ಹಮ್ಮಿಕೊಳ್ಳಲಾಯಿತು.


ಶಿರ್ಲಾಲು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಆಗಿರುವ ಶ್ರೀ.ರಾಜು ಇವರು ಮಾತನಾಡುತ್ತಾ ಮಾರಕ ಕಾಯಿಲೆ ಈಗ ಎಲ್ಲೆಂದರಲ್ಲಿ ಹರಡುತ್ತಾ ಇದೆ, ಆದ್ದರಿಂದ ನಮ್ಮ ಆರೋಗ್ಯದ ಕಾಳಜಿ ನಾವೇ ಮಾಡಬೇಕು. ಮನೆಯಿಂದ ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಈ ದಿನ ಪಡೆದ ಆಹಾರದ ಕಿಟ್ಟನ್ನು ಸಮರ್ಪಕವಾಗಿ ಬಳಸಲು ಕರೆ ನೀಡಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರು ಮಾತನಾಡುತ್ತಾ ಸಂಸ್ಥೆ ಸದಾ ಸಮಾಜ ಸೇವೆಗೆ ಸಿದ್ದ, ಕಳೆದ ವರ್ಷ ಸಂಭವಿಸಿದ ಪ್ರವಾಹದ ಸಂಧರ್ಭದಲ್ಲಿ ಸಂಸ್ಥೆಯ ಮೂಲಕ ನಡೆದ ಕೆಲಸವನ್ನು ನೆನೆಸುತ್ತಾ, ಕೋವಿಡ್-19ಈ ಸಂಧರ್ಭದಲ್ಲೂ ಸಂಸ್ಥೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ದ.ಕ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅತೀ ಅಗತ್ಯವುಳ್ಳ 4306 ಕುಟುಂಬಗಳಿಗೆ ಆಹಾರದ ಕಿಟ್, 10240 ಜನರಿಗೆ ಮಾಸ್ಕ್, 1035 ಸ್ಯಾನಿಟೈಸರ್ ಹಾಗೂ ೨೪೦ ಜನರಿಗೆ ಚಿಕಿತ್ಸೆಗಾಗಿ ಧನ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.


ಈ ಸಂಧರ್ಭದಲ್ಲಿ ಶಿರ್ಲಾಲು ಸೈಂಟ್ ಮೇರಿಸ್ ಚರ್ಚಿನ ಧರ್ಮಗುರುಗಳಾದ ವಂ|ಫಾ| ಪೀಟರ್ ಹಾಗೂ ಯುವ ಸ್ವಯಂ ಸೇವಕರು, ಆಡಳಿತ ಮಂಡಳಿ ಸದಸ್ಯರು ಸಹಕರಿಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಕಾರ್ಯಕರ್ತರಾದ ಶ್ರೀ. ಮಾರ್ಕ್ ಡಿಸೋಜ ಇವರು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.