ಸಹಕಾರಿ ಸಂಸ್ಥೆಗಳಿಗೆ ಆದಾಯ ತೆರಿಗೆಯಿಂದ ಮುಕ್ತಿ; ಸರ್ವೋಚ್ಚ ನ್ಯಾಯಾಲಯದ ತೀರ್ಪು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸಹಕಾರಿ ಸಂಸ್ಥೆಗಳು ಮಾಡುವ ಆರ್ಥಿಕ ವ್ಯವಹಾರಗಳು ಲಾಭದಾಯಕ ವ್ಯವಹಾರವಲ್ಲ. ಅದು ಪರಸ್ಪರ ಸಹಕಾರಿ ತತ್ವದ ವ್ಯವಹಾರ ಮಾತ್ರವೆಂದು ಘೋಷಿಸಿರುವ ಸರ್ವೋಚ್ಚ ನ್ಯಾಯಾಲಯವು ಸಹಕಾರಿ ಸಂಸ್ಥೆಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿಯನ್ನು ನೀಡಿ ಮಹತ್ವದ ತೀರ್ಪು ಪ್ರಕಟಿಸಿದೆ.

ಸಹಕಾರಿ ಕಾಯಿದೆ 79ಎ/ 1960 ರಂತೆ ಸಹಕಾರಿ ಸಂಸ್ಥೆಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಇತ್ತು. ಸಹಕಾರಿ ತತ್ವದ ಆಧಾರದಲ್ಲೇ ಸಂಸ್ಥೆಗಳು ವ್ಯವಹಾರ ನಡೆಸುತ್ತಿವೆ. ಆದರೆ ಆದಾಯ ತೆರಿಗೆ ಇಲಾಖೆಯು ಇಲ್ಲಿ ನಡೆವ ಹಣದ ವರ್ಗಾವಣೆ, ಸೇವಾ ಶುಲ್ಕ, ಪಾಲು ಬಂಡವಾಳದ ವರ್ಗಾವಣೆ ಸಹಿತ ಸಂಸ್ಥೆಯ ಎಲ್ಲ ವ್ಯವಹಾರಗಳನ್ನೂ ತೆರಿಗೆ ವ್ಯಾಪ್ತಿಗೆ ಬರುವುದಾಗಿ ವಾದ ಮಂಡಿಸಿತ್ತು. ಇದರಿಂದಾಗಿ ಸಹಕಾರ ಸಂಸ್ಥೆಗಳೂ ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದವು. ಈ ನಿಟ್ಟಿನಲ್ಲಿ ಇಂದಿನ ತೀರ್ಪು ಐತಿಹಾಸಿಕವಾದುದು ಎಂದವರು ಅಭಿಪ್ರಾಯಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.