1.63 ಎಕ್ರೆ ಜಾಗದಲ್ಲಿ ಬಂಗಾರದ ಬೆಳೆ ಬೆಳೆದ ಕೃಷಿಕ ಸಿಲ್ವೆಸ್ಟರ್ ರೊಡ್ರಿಗಸ್

✍️-ಹೆರಾಲ್ಡ್ ಪಿಂಟೊ ಉಜಿರೆ

“ಕೃಷಿತೇ ನಾಸ್ತಿ ದುರ್ಭಿಕ್ಷಂ” ಎಂಬ ಮಾತು ಇದ್ದರೂ ಕೃಷಿಯಿಂದ ಹಣಗಳಿಸಲು ಸಾಧ್ಯವಿಲ್ಲ. ನಷ್ಟವೇ ಎಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಕೃಷಿಯಿಂದ ಸ್ವಾಭಿಮಾನದ ಬದುಕು ಸಾಧ್ಯ ಎಂದು ಹಲವು ಸಾಧಕರು ತೋರಿಸಿಕೊಟ್ಟಿದ್ದಾರೆ. ಇತ್ತೀಚೆಗೆ ಕೊರೊನಾ ಕಾರಣದಿಂದ ಹೊರ ಊರುಗಳಿಂದ ಹಿಂತಿರುಗಿ ಬಂದಿರುವ ಯುವಕರು ಕೂಡಾ ಕೃಷಿಯತ್ತ ಆಕರ್ಷಿತರಾಗಿರುವುದು ಇತ್ತಮ ಬೆಳವಣಿಗೆಯೇ ಸರಿ! ಇಂತಹ ಯುವಕರಿಗೆ ಮಾದರಿಯಾಗುವಂತೆ ಕೇವಲ 1 ಎಕ್ರೆ 63 ಸೆಂಟ್ಸ್ ಜಾಗದಲ್ಲಿ ಅತ್ಯುತ್ತಮ ಕೃಷಿ ಕಾರ್ಯ ನಡೆಸುತ್ತಿರುವ ಉಜಿರೆಯ ಸಿಲ್ವೆಸ್ಟರ್ ರೋಡ್ರಿಗಸ್ ರವರ ಸಾಧನೆಯ ಬದುಕಿನ ಕಥೆ ಇಲ್ಲಿದೆ.

1978ರಲ್ಲಿ ಗಲ್ಫ್ ರಾಷ್ಟ್ರದಲ್ಲಿ 15ವರ್ಷ ಚಾಲಕರಾಗಿದ್ದು, ನಂತರ ಊರಿಗೆ ಬಂದು ತನ್ನ ಸ್ವಂತ ಹಣದಲ್ಲಿ ಒಂದು ಲಾರಿಯನ್ನು ಮತ್ತು 1. 63ಎಕ್ರೆ ಜಾಗ ಖರೀದಿಸುತ್ತಾರೆ. ಲಾರಿಯನ್ನು ಮಾರಿ ಕೃಷಿಯಲ್ಲಿ ತೊಡಗಿಸಿಕೊಂಡು, ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿತರಾಗಿ ತನ್ನ ತೋಟದಲ್ಲಿ ಚಿನ್ನ ಬೆಳೆಯುವ ರೈತನಾಗಿದ್ದಾರೆ.


ಕಳೆದ 26 ವರ್ಷಗಳಿಂದ ಉಜಿರೆಯಲ್ಲಿ ತನ್ನ ತೋಟದಲ್ಲಿ ತೆಂಗು, ಅಡಿಕೆ, ಕಾಳುಮೆಣಸು, ಬಾಳೆ, ಮನೆಗೆ ಬೇಕಾದ ತರಕಾರಿ ಬೆಳೆಸಿ ಸಂತೃಪ್ತಿ ಜೇವನ ನಡೆಸುತ್ತಿದ್ದಾರೆ. ಅಡುಗೆಗೆ ಗೋಬರ್ ಗ್ಯಾಸ್, ತೋಟಕ್ಕೆ ಸೆಗಣಿ, ಸ್ಲರಿ, ಸೊಪ್ಪುಗೊಬ್ಬರ ಬಳಸಿದವರು. ವಾರ್ಷಿಕವಾಗಿ 30 ತೆಂಗಿನ ಮರದಿಂದ 2500-3000 ತೆಂಗಿನಕಾಯಿ, 600 ಅಡಿಕೆ ಮರದಿಂದ 8-12ಕಿಂಟಾಲ್ ಅಡಿಕೆ, 700 ಕಾಳುಮೆಣಸು ಬಳ್ಳಿ ಯಿಂದ 13 ಕಿಂಟಾಲ್ ಕಾಳುಮೆಣಸು ಉತ್ಪತ್ತಿ ಪಡೆಯುವ ಯಜಮಾನರಾಗಿದ್ದಾರೆ.

ಇದು ಅಲ್ಲದೆ ಹಲಸು, ಮಾವು, ಚಿಕ್ಕು, ಜೀಗುಜ್ಜೆ, ಬಾಳೆ, ತರಕಾರಿಯನ್ನು ಬೆಳೆಯುತ್ತಾರೆ. ಆರಂಭದಲ್ಲಿ ಇವರು ಹೈನುಗಾರಿಕೆಯಲ್ಲಿಯೂ ತೊಡಗಿಸಿ ದಿನಕ್ಕೆ ೩೦ಲೀಟರ್ ಹಾಲು, ಪ್ರಸ್ತುತ 1ದನ ದಿಂದ 16 ಲೀಟರ್ ಹಾಲು ಊರವರಿಗೆ ಮತ್ತು ಹಾಲು ಸಂಘಕ್ಕೆ ಮಾರಾಟ ಮಾಡುತ್ತಾರೆ. ದನಕ್ಕೆ ಬೇಕಾದ ಹುಲ್ಲು ಇವರೇ ಬೆಳೆಸುತ್ತಾರೆ.

ಅಡುಗೆಗೆ ಗೋಬರ್ ಗ್ಯಾಸ್;
ಮನೆಯ ಅಡುಗೆಗೆ ಗೋಬರ್ ಗ್ಯಾಸ್ ಬಳಸುತ್ತಿದ್ದು ಹಟ್ಟಿ ಗೊಬ್ಬರ ವಿಶಿಷ್ಟ ರೀತಿಯಲ್ಲಿ ಸಂಗ್ರಹ ಮಾಡುತ್ತಾರೆ. ಗೊಬ್ಬರಕ್ಕೆ ಹಟ್ಟಿ : ಸೊಪ್ಪು, ಅಡಿಕೆ ಸಿಪ್ಪೆ, ಸೆಗಣಿ, ತನ್ನ ತೋಟಕ್ಕೆ ಬೇಕಾದ ಹಟ್ಟಿ ಗೊಬ್ಬರ ಕೇವಲ ಒಂದು ದನದಿಂದಲೇ ತಯಾರಿಸುತ್ತಾರೆ.

ಕುಟುಂಬ : ಪತ್ನಿ ಜೊಸ್ಪಿನ್ ರೊಡ್ರಿಗಸ್ (62) ಇವರಿಗೆ ಕೃಷಿಯಲ್ಲಿ ಸಾಥ್ ನೀಡುತ್ತಿದ್ದು, ಪುತ್ರ ವಿಲ್ಸನ್ ರೊಡ್ರಿಗಸ್ ಗುಜರಾತ್ ನಲ್ಲಿ ವಿಂಡ್ ಪವರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರಿ ವೆರಿನ ರೊಡ್ರಿಗಸ್ ಲಕ್ನೊ ಯೂನಿವರ್ಸಿಟಿ ಯಲ್ಲಿ ಬೊಟಾನಿಯಲ್ಲಿ ಪಿ.ಎಚ್. ಡಿ. ಮಾಡುತ್ತಿದ್ದು, ಎಸ್. ಎಸ್. ಎಲ್. ಸಿ. ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕಿಗೆ ದ್ವಿತೀಯ ಸ್ಥಾನ , ಉಜಿರೆ ಎಸ್.ಡಿ.ಎಂ.ಕಾಲೇಜ್ ಬಿ.ಎಸ್.ಸಿ. ಯಲ್ಲಿ ಪ್ರಥಮ ರಾಂಕ್, ಮೈಸೂರ್ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್.ಸಿ. ಯಲ್ಲಿ 8 ಚಿನ್ನದ ಪದಕ ವಿಜೇತೆಯಾಗಿದ್ದಾರೆ.

ಕೃಷಿಯೇ ನನ್ನ ಸರ್ವಸ್ವ ತಾನು ಮಾಡಿದ್ದು ಉತ್ತಮ ಮಗ ಮಾಡಿದ್ದು ಮಧ್ಯಮ ಆಳು ಮಾಡಿದ್ದು ಹಾಳು ಎಂಬ ಗಾದೆ ಮಾತಿನಿಂದ, ಸಾಧನೆ ಮಾಡಿದರೆ ಎಲ್ಲವು ಸಾಧ್ಯ. ಎಲ್ಲ ಕೆಲಸಕ್ಕೆ ಕೂಲಿಯನ್ನು ನಂಬಿದರೆ ಸಾಧ್ಯವಿಲ್ಲ. ಸ್ವತಹ ಕೆಲಸ ಮಾಡಲು ಈ ವರ್ಷ ಬಂದ ಮಹಾಮಾರಿ ಕೊರೋನಾ ಕೋವಿಡ್ – 19 ಎಂಬ ವೈರಸ್ ಎಲ್ಲರಿಗೂ ಪಾಠ ಕಲಿಸಿದೆ. ನಮ್ಮಲಿದ್ದ ಅಲ್ಪ ಸ್ವಲ್ಪ ಜಾಗದಲ್ಲಿ ಕೃಷಿ ಮಾಡಲು ಕಲಿಯೋಣ. ಕೃಷಿಗೆ ಮಹತ್ವ ಕೊಡಿ ಎಂಬುದೇ ನನ್ನ ಉದ್ದೇಶ. ಹೈನಗಾರಿಕೆಯಿಂದ ಗೊಬ್ಬರ – ಹಾಲು, ಹಾಗೂ ಕೃಷಿಯಿಂದ ಒಟ್ಟು ವಾರ್ಷಿಕ ಆದಾಯ ರೂ. 5.50 – 6 ಲಕ್ಷ ಬರುತ್ತದೆ.
-ಸಿಲ್ವೆಸ್ಟರ್ ರೊಡ್ರಿಗಸ್ ಕೃಷಿಕರು, ಉಜಿರೆ ,ಮೊಬೈಲ್ : 9972425139

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.