ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆ ಧರ್ಮಸ್ಥಳ ದೇವಸ್ಥಾನದಿಂದ ಪವಿತ್ರ ಮಣ್ಣು, ನೇತ್ರಾವತಿ ನದಿಯ ಜಲ ಪೂಜೆಗೆ

ಬೆಳ್ತಂಗಡಿ: ತಾಲೂಕಿನ ಪುಣ್ಯ ಕ್ಷೇತ್ರವಾದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನದಿಂದ ಪವಿತ್ರ ಮಣ್ಣು ಮತ್ತು ನೇತ್ರಾವತಿ ನದಿಯ ಜಲವನ್ನು ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆ ಪೂಜೆಗೆ ಬಳಸಲಿದ್ದು ಅದನ್ನು ಅಯೋಧ್ಯೆಗೆ ಕಳುಹಿಸುವ ನಿಮಿತ್ತ ಜು.21 ರಂದು ವಿಶ್ವ ಹಿಂದು ಪರಿಷತ್ ಬಜರಂಗದಳದ ಕಾರ್ಯಕರ್ತರಿಂದ ಧರ್ಮಸ್ಥಳ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಪವಿತ್ರ ಮಣ್ಣು ಮತ್ತು ಜಲವನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಿಕೊಡಲಾಯಿತು.


ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ವಿಶ್ವ ಹಿಂದೂಪರಿಷತ್ ಬೆಳ್ತಂಗಡಿ ಪ್ರಖಂಡದ ಉಪಾಧ್ಯಕ್ಷರಾದ ಶ್ರೀಧರ್ ಗುಡಿಗಾರ್, ವಿಶ್ವಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಕಾರ್ಯದರ್ಶಿ ಮೋಹನ್.ಕೆ, ಬಜರಂಗದಳ ಬೆಳ್ತಂಗಡಿ ಪ್ರಖಂಡ ಸಂಯೋಜಕರಾದ ಸಂತೋಷ್ ಆತ್ತಾಜೆ, ಸಹ ಸಂಯೋಜಕರಾದ ರಮೇಶ್ ಧರ್ಮಸ್ಥಳ, ಗಣೇಶ್ ಕಳೆಂಜ, ತಾಲೂಕು ಗೋ ರಕ್ಷಾ ಪ್ರಮುಖರಾದ ದಿನೇಶ್ ಚಾರ್ಮಾಡಿ, ವಿಶ್ವ ಹಿಂದೂ ಪರಿಷತ್ ಉಜಿರೆ ಗ್ರಾಮ ಸಮಿತಿ ಮುಂಡತ್ತೂಡಿ ಅಧ್ಯಕ್ಷ ಪ್ರಶಾಂತ್, ಕೃಷ್ಣ ಧರ್ಮಸ್ಥಳ, ಗ್ರಾ. ಪಂ. ಸದ್ಯಸರು, ದಿವಾಕರ ಉಜಿರೆ ಭಾಗವಹಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.