ಜಾರಿಗೆ ಬೈಲು ಮಸೀದಿ ಸಮೀಪದ ವ್ಯಕ್ತಿಗೆ ಕೊರೊನಾ ಪಾಸಿಟಿವ್

Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಫು : ಇಲ್ಲಿಯ ಜಾರಿಗೆ ಬೈಲು ಸಮೀಪ ಮಸೀದಿ ಪಕ್ಕದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿರುತ್ತದೆ.

ಕಳೆದ 4-5 ತಿಂಗಳ ಹಿಂದೆ ವಿದೇಶದಿಂದ ಊರಿಗೆ ಮರಳಿದ್ದರು. ಮತ್ತೆ ವಿದೇಶಕ್ಕೆ ಹೋಗಲು ಇರುವುದರಿಂದ ಆರೋಗ್ಯ ದೃಢೀಕರಿಸುವ ಸಲುವಾಗಿ ಸ್ವ ಇಚ್ಚೆಯಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ತೆರಳಿದರು. ಇಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಇದೆಯೆಂದು ತಿಳಿದು ಬಂದಿದೆ.

ಇವರಿಗೆ ಈ ಮೊದಲು ಯಾವುದೇ ರೀತಿಯ ಆನಾರೋಗ್ಯದ ಮುನ್ಸೂಚನೆ ಇರಲ್ಲಿಲ್ಲವೆಂದು ಮನೆಯವರು ಮತ್ತು ಸ್ಥಳೀಯರು ಹೇಳುತ್ತಾರೆ. ಆದರೂ ಪಾಸಿಟಿವ್ ಇರುವ ವ್ಯಕ್ತಿಯು ಸ್ವಇಚ್ಛೆಯಿಂದ ನಾನು ಉಜಿರೆಯ ಎಸ್.ಡಿ.ಎಂ.ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗಾಗಿ ತೆರಲುತ್ತೇನೆ. ಯಾರು ಭಯ ಪಡುವುದು ಬೇಡ ಎಂದರು. ಅದರಿಂದ ಕಳಿಯ ಪಂಚಾಯತು ಮುತುವರ್ಜಿ ವಹಿಸಿ ಅಂಬುಲೆನ್ಸ್ ಮೂಲಕ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಯಿತು. ಹಾಗೂ ಮನೆಯಲ್ಲಿ ಪತ್ನಿ ಮತ್ತು 2 ಮಕ್ಕಳಿಗೆ ಹೋಮ್ ಕ್ವಾರೆಂಟೆೈನ್ ಮಾಡುವುದಾಗಿ ಕಳಿಯ ಪಂಚಾಯತು ಅಭಿವೃದ್ಧಿ ಅಧಿಕಾರಿ,ನ್ಯಾಯತರ್ಫು ಬೀಟ್ ಪೊಲೀಸ್ ಮತ್ತು ಸ್ಥಳೀಯರು ತಿಳಿಸಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.