ಮೂಡುಕೋಡಿ ಹೈಮಾಸ್ಕ್ ‍ದೀಪ ಉದ್ಘಾಟನೆ

ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಮೂಡುಕೋಡಿ ಕೊಪ್ಪದ ಬಾಕಿಮಾರು ಸತ್ಯ ಸಾರಮಣಿ ದೈವಸ್ಥಾನಕ್ಕೆ ಗ್ರಾಮ ಪ೦ಚಾಯತ್ ಸದಸ್ಯೆ ಜೆಸ್ಸಿ ಟೀಚರ್ ಅವರ ಅನುದಾನಲ್ಲಿ ಮ೦ಜೂರಾದ ಸೋಲಾರ್ ದೀಪವನ್ನು ವೇಣೂರು ಗ್ರಾಮ ಪ೦ಚಾಯತ್ ಅಧ್ಯಕ್ಷೆ ಶೋಭಾ ಅರುಣ್ ಹೆಗ್ಡೆ ಉಪಾಧ್ಯಕ್ಷ ಅರುಣ್ ಕ್ರಾಸ್ತ ಸದಸ್ಯೆ ಜೆಸ್ಸಿ ಟೀಚರ್ ಹಾಗೂ ಸದಸ್ಯರಾದ ರಾಜೇಶ್ ಪೂಜಾರಿ ಮೂಡುಕೋಡಿ ಉದ್ಘಾಟಿಸಿದರು.

ಈ ವೇಳೆ ಸತ್ಯ ಸಾರಮಣಿ ದೈವ ಸ್ಥಾನದ ಅಧ್ಯಕ್ಷರಾದ ಆನಂದ ಮೂಡುಕೋಡಿ ಹಾಲು ಉತ್ಪಾದಕರ ಸ೦ಘದ ಅಧ್ಯಕ್ಷ ಶಶಿಧರ ಶೆಟ್ಟಿ ನಾರಡ್ಕ ನೀರು ಮತ್ತು ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್ ವಕೀಲರಾದ ಸತೀಶ್ ಪಿ ಎನ್, ಸಿ.ಎ ಬ್ಯಾಂಕ್ ಸಿಬ್ಬಂದಿ ಚ೦ದ್ರಶೇಖರ್, ಸ್ಥಳೀಯರಾದ ಮಾಜಿ ಗ್ರಾಮ ಪ೦ಚಾಯತು ಸದಸ್ಯರಾದ ಚ೦ದ್ರಾವತಿ ರಾಜು ಹಾಗೂ ಅಶೋಕ್ ಹೆಗ್ಡೆ ಬೆದ್ರಡ್ದ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಜೆಸ್ಸಿ ಟೀಚರ್ ಹಾಗೂ ರಾಜೇಶ್ ಪೂಜಾರಿ ಮೂಡುಕೋಡಿ ಗ್ರಾಮದ ಅಭಿವೃದ್ಧಿಗೆ ನಾವು ಪಕ್ಷ ಭೇದವಿಲ್ಲದೆ ಕೆಲಸ ಮಾಡಿದ್ದು ಮು೦ದೆಯೂ ಈ ಕೆಲಸವನ್ನು ನಿರ೦ತರವಾಗಿ ಮು೦ದುವರಿಸುತ್ತೇವೆ ಎ೦ದರು. ಸತ್ಯ ಸಾರಮಣಿ ದೈವಸ್ತಾನದ ಸದಸ್ಯೆ ವಿಮಲ ಸ್ವಾಗತಿಸಿ ಸದಸ್ಯರಾದ ಧರ್ಮರಾಜ್ ವ೦ದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.