ಜೊತೆಗಾರನ ಕುಮ್ಮಕ್ಕಿನಿಂದ ಕಾರು ಢಿಕ್ಕಿ ಹೊಡೆಸಿದ ನಾಲ್ವರು ಆರೋಪಿಗಳು ಪೊಲೀಸ್ ವಶ

ಬೆಳ್ತಂಗಡಿ: ಜೂ.8ರಂದು ಗುರುವಾಯನಕೆರೆಯಲ್ಲಿ ಬೆಳಗ್ಗಿನ ಜಾವ ವಾಕಿಂಗ್ ಹೋಗುತ್ತಿದ್ದ ಕೊಡಗು ಶನಿವಾರಸಂತೆ ತಾಲೂಕಿನ ತ್ಯಾಗರಾಜ್ ಕಾಲನಿ ನಿವಾಸಿ ನಂದೀಶ(42) ಎಂಬವರಿಗೆ ಮಾರುತಿ-800 ನಿಂದ ಡಿಕ್ಕಿ ಹೊಡೆದು ಪರಾರಿಯಾದ 4 ಮಂದಿ ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಕೊಡಗು ಶನಿವಾರಸಂತೆ ತಾಲೂಕು ಪರಿಸರದ ನಿವಾಸಿಗಳಾದ ಪ್ರದೀಪ್, ವರುಣ್, ಅಭಿಷೇಕ್ ಹಾಗೂ ಧರ್ಮಪ್ಪ ಎಂಬ ಆರೋಪಿಗಳ, ತನಿಖೆ ನಡೆಸುತ್ತಿದ್ದಾರೆ.

ವ್ಯವಹಾರದ ನಿಮಿತ್ತ ಗುರುವಾಯನಕೆರೆಯಲ್ಲಿ ವಸತಿ ಗೃಹದಲ್ಲಿ ತಂಗಿದ್ದ ಪ್ರದೀಪ್ ಹಾಗೂ ನಂದೀಶ್ ಅವರು ಜೂ.8 ರಂದು ಬೆಳಗ್ಗೆ ವಾಕಿಂಗ್ ಹೋಗುತ್ತಿರುವ ಸಮಯ ಕುಲಾಲ ಮಂದಿರದ ಬಳಿ ಹಿಂದಿನಿಂದ ಬಂದ ಮಾರುತಿ ಕಾರು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಗಾಯಾಳು ನಂದೀಶ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದು, ಪ್ರದೀಪ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಆರೋಪಿಗಳ ವಶ: ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದಾಗ ನಂದೀಶರ ಜೊತೆಗಿದ್ದು, ದೂರುದಾರರಾಗಿದ್ದ ಪ್ರದೀಪ್ ಎಂಬಾತನೇ ಈ ಕೃತ್ಯದ ಸೂತ್ರದಾರ ಎಂದು ಪತ್ತೆ ಹಚ್ಚಿದ್ದಾರೆ. ಹಣಕಾಸಿನ ವಿಷಯದಲ್ಲಿ ನಂದೀಶ ಮತ್ತು ಪ್ರದೀಪ್ ಅವರ ನಡುವೆ ಇದ್ದ ವೈಮನಸ್ಸಿನ ಹಿನ್ನಲೆಯಲ್ಲಿ ಪ್ರದೀಪ್ ಸೇರಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.