ಕ್ವಾರಂಟೈನ್ ನಿಯಮ ಉಲ್ಲಂಘನೆ: ಆರೋಪಿಯ ಮೇಲೆ ಕೇಸು

ಬೆಳ್ತಂಗಡಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ವ್ಯಕ್ತಿಯ ಮೇಲೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಘಟನೆ ಜು.15 ರಂದು ವರದಿಯಾಗಿದೆ.

ನೆರಿಯ ಗ್ರಾಮದ ನಿವಾಸಿ  ಬೆಳ್ತಂಗಡಿಯ ಲಾಡ್ಜ್ ನಲ್ಲಿ ಕ್ವಾರಂಟೈನ್ ಆಗಿದ್ದ ಅಂಟೋನಿ ಕ್ವಾರಂಟೈನ್  ಉಲ್ಲಂಘಿಸಿದ ಆರೋಪಿಯಾಗಿದ್ದಾರೆ.

ಜು.8ರಂದು  ಆರೋಪಿಯು ಬೆಳ್ತಂಗಡಿಯ  ರೆಸಿಡೆನ್ಸಿಯಲಿದ್ದವರು ಕ್ವಾರಂಟೈನ್ ನಿಮಯ ಉಲ್ಲಂಘಿಸಿದ ಬಗ್ಗೆ ಜಿಲ್ಲಾಧಿಕಾರಿಯವರ  ಪತ್ರ ಸಂಖ್ಯೆ ಸಿ.ಎ.ಎಲ್.ಸಿ.ಆರ್ 22/20-20/ಸಿ ದಿನಾಂಕ: 06-07-2020 ರಂತೆ ಕೋವಿಡ್-19 ಸಾಂಕ್ರಮಿಕ ರೋಗದ ಕ್ವಾರಂಟೇನ್ ನಿಯಮ ಉಲ್ಲಂಘಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ನೀಡಿದ ನಿರ್ದೇಶನ ದಂತೆ ಜಿಪಿಎಸ್ ಆಧಾರಿತ ಮಾಹಿತಿ ಪಡೆದು , ಸದ್ರಿ ವ್ಯಕ್ತಿಯ ಮೇಲೆ ಕಲಂ 269,270,271 ಐಪಿಸಿ ಮತ್ತು 5(1) ಕರ್ನಾಟಕ ಸಾಂಕ್ರಾಮಿಕ ರೋಗಗಳ ಆದ್ಯಾದೇಶ 2020 ರಂತೆ ಸೂಕ್ತ ಕಾನೂನು ಕ್ರಮ ಜರುಗಿಸಿ ಬೆಳ್ತಂಗಡಿ ಠಾಣಾ ಪಿಎಸ್ಐ  ನಂದಕುಮಾರ್ ಎಂ ಎಂ ರವರು ತನಿಖೆಯನ್ನು ಮುಂದುವರಿಸಿರುತ್ತಾರೆ.

ಜಿಲ್ಲಾಡಳಿತ ನಿರ್ದೇಶಿಸಿದ ಈ ಪ್ರಕರಣವು ಕೋವಿಡ್ 19 ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಕ್ವಾರೆಂಟೈನ್ ನಿಯಮ ಉಲ್ಲಂಘಿಸುವ ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.