ಕುಕ್ಕೇಡಿ: ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸಾರ್ವಜನಿಕ ಶೌಚಾಲಯ ಉದ್ಘಾಟನೆ

ಕುಕ್ಕೇಡಿ:ಸಮುದಾಯ ಶೌಚಾಲಯ ಬಳಸಿ, ಆರೋಗ್ಯ ಬೆಳೆಸಿ ಅಭಿಯಾನ ದ ಅಂಗವಾಗಿ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾ ಗಾಂಧಿ ಕ್ರೀಡಾಂಗಣದ ಬಳಿ ಅಳದಂಗಡಿ ಜಿ.ಪಂ.ಕ್ಷೇತ್ರದ ಸದಸ್ಯರಾದ  ಶೇಖರ್ ಕುಕ್ಕೇಡಿ ಇವರ ಅನುದಾನದಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸುಮಾರು 4.00ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಹೊಸ ಸಾರ್ವಜನಿಕ ಶೌಚಾಲಯವನ್ನು ಜು.15 ರಂದು ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯರಾದ  ಶೇಖರ್ ಕುಕ್ಕೇಡಿ , ಮಾಜಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಮಾಜಿ ಉಪಾಧ್ಯಕ್ಷಾರದ ಅಶೋಕ ಪಾಣೂರು, ಮಾಜಿ ಸದಸ್ಯೆ ಗೌರಿ, ಪಿಡಿಒ ನವೀನ್ ಮತ್ತು ಶುಚಿತ್ವ ಮತ್ತು ನೈರ್ಮಲ್ಯ ಜಿಲ್ಲಾ ಸಂಯೋಜರಾದ ಪವನ್ ಕುಮಾರ್ ಎಸ್ ಶೆಟ್ಟಿ, ಪಂಚಾಯತ್ ಸಿಬ್ಬಂದಿಗಳು, ಗುತ್ತಿಗೆದಾರರು ಮತ್ತು ಸಾರ್ವಜನಿಕರು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.