ಪಿಯುಸಿ: ಶೇ 92.51 ಫಲಿತಾಂಶ; ಅನುಗ್ರಹ: 99.2, ಎಸ್‌ಡಿಎಂ ಸನಿವಾಸ: 98.72, ವಾಣಿ: 98.58

ಬೆಳ್ತಂಗಡಿ: ಕಳೆದ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನಡೆದ ದ್ವೀತಿಯ ಪಿಯುಸಿ ವಾರ್ಷಿಕ ಪಬ್ಲೀಕ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಒಟ್ಟು 20 ಪದವಿ ಪೂರ್ವ ಕಾಲೇಜುಗಳಿಂದ ಪರೀಕ್ಷೆಗೆ ಹಾಜರಾದ 3381 ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ 3138 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ ತಾಲೂಕಿನಲ್ಲಿ ಶೇ 92.51 ಫಲಿತಾಂಶ ದಾಖಲಾಗಿದೆ.

ಫಲಿತಾಂಶ ಪಡೆದ ಕಾಲೇಜುಗಳಲ್ಲಿ ಅನುಗ್ರಹ ಕಾಲೇಜು ಉಜಿರೆ ಶೇ 99.2 ಪ್ರಥಮ ಸ್ಥಾನದಲ್ಲಿದ್ದರೆ, ಎಸ್.ಡಿ.ಎಂ ವಸತಿ ಶಾಲೆ ಉಜಿರೆ ಶೇ 98.72 ದ್ವೀತಿಯ ಸ್ಥಾನ ಮತ್ತು ವಾಣಿ ಪ.ಪೂ.ಕಾಲೇಜು ಹಳೆಕೋಟೆ ಬೆಳ್ತಂಗಡಿ ಶೇ 98.58 ಫಲಿತಾಂಶ ಪಡೆದು ತೃತೀಯ ಸ್ಥಾನದಲ್ಲಿದೆ. ಎಸ್.ಡಿ.ಎಂ ಪ.ಪೂ.ಕಾಲೇಜು ಉಜಿರೆಯಲ್ಲಿ 1054 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1022 ಮಂದಿ ಉತ್ತೀರ್ಣರಾದರೆ, ವಾಣಿ ಪ.ಪೂ.ಕಾಲೇಜಿನಲ್ಲಿ 423 ಮಂದಿ ವಿದ್ಯಾರ್ಥಿಗಳಲ್ಲಿ 417 ಮಂದಿ ತೇರ್ಗಡೆಗೊಂಡಿದ್ದಾರೆ. ಮಡಂತ್ಯಾರು ಸೇ.ಹಾ.ಕಾಲೇಜಿನಲ್ಲಿ 277 ಮಂದಿಯಲ್ಲಿ 263 ಮತ್ತು ಪುಂಜಾಲಕಟ್ಟೆ ಪ.ಪೂ.ಕಾಲೇಜಿನಲ್ಲಿ 212 ವಿದ್ಯಾರ್ಥಿಗಳಲ್ಲಿ 182 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗ : ಅನುಗ್ರಹ ಉಜಿರೆ, ಸಂತ ತೆರೆಸಾ ಬೆಳ್ತಂಗಡಿ ಶೇ 100
ವಾಣಿಜ್ಯ ವಿಭಾಗ : ವೇಣೂರು ಸ.ಪ.ಪೂ.ಕಾಲೇಜು ಶೇ 100
ವಿಜ್ಞಾನ ವಿಭಾಗ : ಸ.ಪ.ಪೂ.ಕಾಲೇಜು ಪುಂಜಾಲಕಟ್ಟೆ ಶೇ 100

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.