ಗೇರುಕಟ್ಟೆ ಮರದಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿಗೆ ಜವನ್ಯೆರೆ ತಂಡದಿಂದ ಧನಸಹಾಯ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಮಜಲಡ್ಡ ನಿವಾಸಿ ಹದಿಹರೆಯದ ಯುವಕ ಸಂದೀಪ್ ಪೂಜಾರಿ ಮರದಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಜೂ. 29 ರಂದು ನಡೆಯಿತು.
ಸಂದೀಪ್ ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗ ಆಯ ತಪ್ಪಿ ಮರದಿಂದ ಬಿದ್ದರು. ಈ ಸಂದರ್ಭದಲ್ಲಿ ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ವಸಂತ ಗೌಡ ಪಳ್ಳಿದಲ್ಕೆ ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಿದರು. ಹಾಗೂ ಅವರ ಸಹಾಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು ಪರೀಕ್ಷೆ ಮಾಡಿ ಬೆನ್ನುಮೂಳೆಗೆ ತೀವ್ರವಾದ ಗಾಯವಿದೆ ಎಂದು ತಿಳಿಸಿದರು.

ಈಗಾಗಲೇ ಸುಮಾರು ಅಂದಾಜು ಒಂದೂವರೆ ಲಕ್ಷದಷ್ಟು ಖರ್ಚಾಗಿದೆ. ಸಂದೀಪ್‌ರವರು ಮನೆಯವರಿಗೆ ಆಧಾರ ಸ್ಥಂಭವಾಗಿದ್ದರು. ಈಗ ಕುಟುಂಬದವರಿಗೆ ದಿಕ್ಕು ತೋಚದಾಗಿದೆ. ಆರಂಭಿಕ ಹಂತದ ಆಸ್ಪತ್ರೆ ವೆಚ್ಚವನ್ನು ಸ್ಥಳೀಯರಾದ ವಸಂತ ಗೌಡ ಭರಿಸಿರುತ್ತಾರೆ. ವಿಷಯ ತಿಳಿದ “ನಮ್ಮಜವನ್ಯೆರ್ ಗೇರುಕಟ್ಟೆ” ತಂಡ (ಯಾವುದೇ ಜಾತಿ, ಮತ, ಭೇದವಿಲ್ಲದೆ) ಯುವಕರು ಸೇರಿ ಸುಮಾರು 30,000 ಮೊತ್ತ ಚೆಕ್ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಹಾಗೂ ಸ್ಥಳೀಯ ರಾದ ಕುಂಟಿನಿ ವೇ.ಮೂ.ರಾಘವೇಂದ್ರ ಬಾಂಗಿಣ್ಣಾಯ 5 ಸಾವಿರ, ಪುಷ್ಪಕ್ ಸೆಲೂನ್ ಮಾಲಕ ಸತೀಶ್ ಭಂಡಾರಿ 1 ಸಾವಿರ ನೀಡಿ ಬೇಗನೆ ಗುಣಮುಖವಾಗಲೆಂದು ಹಾರೈಸಿದರು. ಇನ್ನೂ ಚೇತರಿಸಿಕೊಳ್ಳಲು 4 ರಿಂದ 5 ತಿಂಗಳ ಅಗತ್ಯವಿದೆ ಎಂದು ಸ್ಥಳೀಯರು ಹೇಳುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.