ದ್ವಿತೀಯ ಪಿಯು ರಿಸಲ್ಟ್; ಉಡುಪಿ-ದಕ್ಷಿಣ ಕನ್ನಡ ಮೊದಲ ಸ್ಥಾನ| ಹೆಣ್ಣು ಮಕ್ಕಳೆ ಮೇಲುಗೈ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ. ಇಂದು ಶೇ.61.38ರಷ್ಟು ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಉಡುಪಿ ಮೊದಲ ಸ್ಥಾನಗಳಿಸಿದ್ದರೇ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ, ಕೊಡಗು ಮೂರನೇ ಸ್ಥಾನವನ್ನು ಗಳಿಸಿವೆ. ಕೊನೆಯ ಮೂರು ಸ್ಥಾನಗಳನ್ನು ಚಿತ್ರದುರ್ಗ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳು ಗಳಿಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, 2020ರ ದ್ವಿತೀಯ ಪಿಯುಸಿಯ ಫಲಿತಾಂಶ ನಾವು ಇವತ್ತು ಪ್ರಕಟ ಮಾಡಿದ್ದೇವೆ. ಅನೇಕ ಸವಾಲುಗಳ ನಡುವೆ ನಡೆದಂತ ಈ ಪರೀಕ್ಷೆಯ ಮೌಲ್ಯಮಾಪನ ಆನಂತ್ರ, ಪಿಯುಸಿ ಪರೀಕ್ಷೆಗಳನ್ನು ನಡೆಸಿ, ಫಲಿತಾಂಶಗಳನ್ನು ಕೊಡುತ್ತಿರುವ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದು ಎಂಬುದಾಗಿ ಹೇಳಲಿಚ್ಚಿಸುತ್ತೇನೆ. ಪಿಯುಸಿ ಪರೀಕ್ಷೆ ಮಾರ್ಚ್ 3 ರಿಂದ ಮಾರ್ಚ್ 23ರವರೆಗೆ ನಡೆಯಬೇಕಿತ್ತು. ಆದ್ರೇ ಮಾರ್ಚ್ 22ರ ನಂತ್ರ ಪಿಯುಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಅದನ್ನು ಕೊರೋನಾ ಸಂಕಷ್ಟದ ನಡುವೆಯೂ ಜೂನ್ 18ರಂದು ಇಂಗ್ಲಿಷ್ ಪರೀಕ್ಷೆ ನಡೆಸಲಾಯಿತು. ಈ ವೇಳೆ ಕೊರೋನಾ ತನ್ನ ಕೈಯನ್ನು ಎಲ್ಲಾಕಡೆಯಲ್ಲೂ ಚಾಚಿತ್ತು. ಎಸ್ ಓಪಿ ರಚಿಸಿ, ಅದರ ನಿರ್ದೇಶನದಂತೆ ನಡೆಸಲಾಯಿತು ಎಂದರು.

ಇನ್ನೂ ಈ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲೆ ಮೊದಲ ಸ್ಥಾನವನ್ನು ಪಿಯು ಫಲಿತಾಂಶದಲ್ಲಿ ಪಡೆದಿವೆ. ಮೊದಲು ಉಡುಪಿ – 90.71ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ.92.02 ರಷ್ಟು ಫಲಿತಾಂಶ ಬಂದಿತ್ತು. ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ ಗಳಿಸಿದೆ. ಈ ವರ್ಷ 90.07 ರಷ್ಟು. ಮೂರನೇ ಸ್ಥಾನ ಕೊಡಗು ಗಳಿಸಿದೆ. 81.53 ರಷ್ಟು ಫಲಿತಾಂಶ ಪಡೆದಿದೆ. ಕೊನೆಯ ಮೂರು ಜಿಲ್ಲೆಗಳೆಂದರೇ ಚಿತ್ರದುರ್ಗ ಶೇ.56.8, ರಾಯಚೂರು- 56.22ರಷ್ಟು ಹಾಗೂ ವಿಜಯಪುರ 54.22 ರಷ್ಟು ಫಲಿತಾಂಶ ಗಳಿಸುವ ಮೂಲಕ ಕೊನೆಯ ಸ್ಥಾನವನ್ನು ಗಳಿಸಿದೆ ಎಂಬುದಾಗಿ ತಿಳಿಸಿದರು.

ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಸಂದೇಶ ರವಾನೆಯಾಗಿದೆ. ಇಲಾಖೆಯ ಅಧಿಕೃತ ಜಾಲತಾಣ www.karresults.nic.in ನಲ್ಲೂ ಫಲಿತಾಂಶ ವೀಕ್ಷಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.