ಜು.16 ರಿಂದ ಜಿಲ್ಲೆಯಲ್ಲಿ ಲಾಕ್ ಡೌನ್ : ಜು14ರ ಮಧ್ಯಾಹ್ನ ನಂತರದ ಲಾಕ್ ಡೌನ್ ಇಲ್ಲ: ಶಾಸಕ ಹರೀಶ್ ಪೂಂಜ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜು.16ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ಜು.14ರಿಂದ ತಾಲೂಕಿನಲ್ಲಿ ಜಾರಿಯಾಗಬೇಕಾಗಿದ್ದ ಮಧ್ಯಾಹ್ನ ನಂತರದ ಲಾಕ್‍ಡೌನ್ ಇರುವುದಿಲ್ಲ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ 48 ಗ್ರಾಮ ಪಂಚಾಯತು ಮತ್ತು 1 ನಗರ ಪಂಚಾಯತು ವ್ಯಾಪ್ತಿಯಲ್ಲಿ ನಡೆದ ವರ್ತಕರು, ರಿಕ್ಷಾ ಹಾಗೂ ಇತರ ವಾಹನ ಚಾಲಕ ಮಾಲಕರು ಹಾಗೂ ಸಂಘ-ಸಂಸ್ಥೆಯವರು, ಪಿಡಿಒ, ಅಧಿಕಾರಿ ವರ್ಗದವರ ಉಪಸ್ಥಿತಿಯಲ್ಲಿ ನಡೆದ ಸಮಾಲೋಚನಾನ ಸಭೆಯ ಅಭಿಪ್ರಾಯವನ್ನು ಪಡೆದು ಜು.11ರಂದು ಬೆಳ್ತಂಗಡಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಮಟ್ಟದ ಸಮಾಲೋಚನಾ ಸಭೆಯಲ್ಲಿ ಜು.14ರಿಂದ ಮಧ್ಯಾಹ್ನ 2 ಗಂಟೆಯ ನಂತರ 15 ದಿನಗಳ ಕಾಲ ಸ್ವಯಂ ಪ್ರೇರಿತ ಲಾಕ್‍ಡೌನ್ ಜಾರಿಗೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿತ್ತು.
ಈ ನಡುವೆ ಕೊರೊನಾ ಸೋಂಕು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಜು.15ರ ರಾತ್ರಿಯಿಂದ 7 ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಘೋಷಿಸಿರುವುದರಿಂದ ಜು.14ರ ಮಧ್ಯಾಹ್ನ ನಂತರ ತಾಲೂಕಿನಲ್ಲಿ ನಡೆಯಬೇಕಾಗಿದ್ದ ಸ್ವಯಂ ಪ್ರೇರಿತ ಲಾಕ್‍ಡೌನ್ 7 ದಿನಗಳ ಕಾಲ ಇರುವುದಿಲ್ಲ ಎಂದು ಶಾಸಕರು `ಸುದ್ದಿ’ಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.