ಬೆಳ್ತಂಗಡಿ : V5 ಟೆಕ್ನಾಲಜೀಸ್ ಸೇಲ್ಸ್ & ಸರ್ವೀಸ್ ಸಂಸ್ಥೆಯ ಸಹ ಸಂಸ್ಥೆ ಬೆಳ್ಮನ್ ನಲ್ಲಿ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಳೆದ ಕೆಲ ಸಮಯದಿಂದ ಗುರುವಾಯನಕೆರೆ ಸಪ್ತಗಿರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುವತ್ತಿರುವ V5 ಟೆಕ್ನಾಲಜೀಸ್ ಸೇಲ್ಸ್ & ಸರ್ವೀಸ್ ಸಂಸ್ಥೆಯ ಇನ್ನೊಂದು ಶಾಖೆಯು ಶ್ರೀ ದಾಮೋದರ ಕಾಂಪ್ಲೆಕ್ಸ್,ಹೋಟೆಲ್ ಉಜಾಲ ಬಳಿ ಬೆಳ್ಮನ್ ಕಾರ್ಕಳದಲ್ಲಿ ಶುಭಾರಂಭಗೊಂಡಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ ನೂತನ ಸಂಸ್ಥೆಯ ಉದ್ಘಾಟನೆ ನೇರವೆರಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ,ಜಿ.ಪಂ ಸದಸ್ಯೆ ಗೀತಾಂಜಲಿ ಎಂ ಸುವರ್ಣ, ಮಂಗಳೂರು ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕಾಧ್ಯಕ್ಷ ಉದಯ ಕುಮಾರ್ ಬಳ್ಳಾಲ್ಬಾಗ್, ಕಾರ್ಕಳ ಯೂತ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ,ಬೆಳ್ಮನ್ ಹ್ಯುಮೆನಿಟಿ ಟ್ರಸ್ಟ್ ಸ್ಥಾಪಕ ರೋಷನ್ ಬೆಳ್ಮನ್,ಉದ್ಯಮಿ ಕೋಡಿ ಕಂಬಳ ಪ್ರಸಾದ್ ಶೆಟ್ಟಿ, ದಾಮೋದರ ಕಾಂಪ್ಲೆಕ್ಸ್ ಮಾಲಕ ಕೇಶವರಾಯ,ಬೆಳ್ಮನ್ ಉದ್ಯಮಿ ಜೋಯಲ್ ಅರನ್ನ,ಪ್ರಕಾಶ್ ಮರೋಡಿ ಅತಿಥಿಗಳಾಗಿ ಭಾಗವಹಿಸಿ ನೂತನ‌ ಸಂಸ್ಥೆಗೆ ಶುಭಕೋರಿದರು‌. ಸಂಸ್ಥೆಯ ಮಾಲಕರ ಮಾತಾ ಪಿತರಾದ ದಿನೇಶ್ ಪೂಜಾರಿ ಲೀಲಾವತಿ ದಂಪತಿ ಆತಿಥಿಗಳನ್ನು ಬರಮಾಡಿಕೊಂಡರು. ಮಾಲಕ ಉದಯ ಬಂಗೇರ ನಾವೂರು ಸ್ವಾಗತಿಸಿ ಸತ್ಕರಿಸಿದರು,ಸತೀಶ್ ಪೂಜಾರಿ ಅಬ್ಬನಡ್ಕ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.