ವೇಣೂರು ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಶೋಭಾ ಹೆಗ್ಡೆ ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆ

Advt_NewsUnder_1
Advt_NewsUnder_1

ವೇಣೂರು: ಸದಸ್ಯರ ಅವಿಶ್ವಾಸ ಮಂಡನೆಯಿಂದ ತೆರವಾಗಿದ್ದ ವೇಣೂರು ಗ್ರಾ.ಪಂ.ನ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದಿದ್ದು, ಶೋಭಾ ಹೆಗ್ಡೆ ಮುಂದಿನ ಅವಧಿಗೆ ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದುಳಿದ ವರ್ಗ ಬಿ ಮಹಿಳೆ ಮೀಸಲು ಸ್ಥಾನದಿಂದ ಅಧ್ಯಕ್ಷ ಸ್ಥಾನಕ್ಕೆ ಶೋಭಾ ಹೆಗ್ಡೆ ನಾಮಪತ್ರ ಸಲ್ಲಿಸಿದ್ದರು. ಗ್ರಾ.ಪಂ.ನ ಒಟ್ಟು 24 ಮಂದಿ ಸದಸ್ಯರಲ್ಲಿ 13 ಮಂದಿ ಸದಸ್ಯರು ಚುನಾವಣಾ ಸಭೆಗೆ ಹಾಜರಾಗಿದ್ದರು. ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಶೋಭಾ ಹೆಗ್ಡೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು. ಹಾಜರಿದ್ದ ಉಪಾಧ್ಯಕ್ಷರಾದ ಅರುಣ್ ಕ್ರಾಸ್ತ ಹಾಗೂ ಸದಸ್ಯರು ಸರಳವಾಗಿ ವಿಜಯೋತ್ಸವ ಆಚರಿಸಿದರು.

ಚುನಾವಣಾಧಿಕಾರಿಯಾಗಿ ತಾಲೂಕು ದಂಡಾಧಿಕಾರಿ ಮಹೇಶ್ ಅವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿ ಬಳಿಕ ಮಾತನಾಡಿ, ಒಗ್ಗಟ್ಟಾಗಿ ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಮಾದರಿ ಪಂಚಾಯತ್ ಆಗಿ ಗುರುತಿಸಿಕೊಳ್ಳಲಿ ಎಂದರು.  ನೂತನ ಅಧ್ಯಕ್ಷೆ ಶೋಭಾ ಹೆಗ್ಡೆ ಮಾತನಾಡಿ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ಒಮ್ಮತದ ನಿರ್ಣಯ ಹಾಗೂ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ಉಪಾಧ್ಯಕ್ಷ ಅರುಣ್ ಕ್ರಾಸ್ತ ಅವರು ಮಾತನಾಡಿ, 94ಸಿ ಯೋಜನೆಯಡಿ 200ಕ್ಕೂ ಅಧಿಕ ಮಂದಿಯ ಹಕ್ಕುಪತ್ರ ವಿತರಣೆಗೆ ಬಾಕಿ ಇದ್ದು, ಈ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದೇನೆ. ತಹಶೀಲ್ದಾರರು ಸೂಕ್ತ ಕ್ರಮಗಳೊಂದಿಗೆ ವಿತರಣೆಗೆ ದಿನನಿಗದಿ ಮಾಡಬೇಕೆಂದು ತಿಳಿಸಿದರು.

ಶೋಭಾ ಹೆಗ್ಡೆ

ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಆಗಮಿಸಿ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು. ತಾಲೂಕು ಚುನಾವಣಾ ಕಚೇರಿಯ ಸಿಬ್ಬಂದಿ ನಾರಾಯಣ ಗೌಡ, ಪಂ. ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ, ಕಾರ್ಯದರ್ಶಿ ವನಜ, ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಉಪಸ್ಥಿತರಿದ್ದು, ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.