ಎಮೈ೯ ಜಲಪಾತಕ್ಕೆ ಪ್ರವಾಸಿಗರಿಗೆ ಅನುಮತಿ ನೀಡದಂತೆ ನಾಗರಿಕರ ಮನವಿ

Advt_NewsUnder_1
Advt_NewsUnder_1

 

ಮಲವಂತಿಗೆ ಗ್ರಾಮ ಪಂಚಾಯತಿನ ವ್ಯಾಪ್ತಿಯ ಕಡಮಗುಂಡಿ, ಎರ್ಮೈ ಮತ್ತು ಎಳನೀರು ಜಲಪಾತಕ್ಕೆ ಪ್ರವಾಸೋದ್ಯಮ ಸಂಖ್ಯೆ ಹೆಚ್ಚಾಗುತ್ತಿದ್ದು, ಆದ್ದರಿಂದ ಕೋವಿಡ್-19 ಕೋರೋನ ಹರಡುವಿಕೆಯ ಸಂಖ್ಯೆ ತಾಲೂಕಿನಲ್ಲಿ ಹೆಚ್ಚು ಆಗುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕೊರೊನಾ ವೈರಸ್ ಹರಡುವಿಕೆಯ ಹೆಚ್ಚಿನ ಸಂಭವ ಇರುವುದರಿಂದ ಸಾರ್ವಜನಿಕರಿಗೆ ಪ್ರವಾಸೋದ್ಯಮದಿಂದ ತೊಂದರೆಯಾಗುತ್ತಿದ್ದು ಇದಕ್ಕೆ ಅನುಮತಿ ನೀಡಬಾರದು. ಪ್ರವಾಸಿಗರ ವಾಹನದಿಂದಾಗಿ ಗ್ರಾಮದ ರಸ್ತೆಗಳು ಹಾಳಾಗುತ್ತಿದ್ದು, ಇದರ ಬಗ್ಗೆ ಸೂಕ್ತ ನಿರ್ಣಯವನ್ನು ಕೈಗೊಂಡು ವನ್ಯಜೀವಿ ಇಲಾಖೆ ಪೊಲೀಸ್ ಇಲಾಖೆ ಮತ್ತಿತರ ಸಂಬಂಧಪಟ್ಟ ಇಲಾಖೆಗಳಿಗೆ ಗ್ರಾಮ ಪಂಚಾಯಿತಿನಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಮೂಲಕ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮದ ಹಿರಿಯರ ಮತ್ತು ಯುವಕರ ಉಪಸ್ಥಿತಿಯಲ್ಲಿ ಗ್ರಾಮದ ವತಿಯಿಂದ ಮನವಿಯನ್ನು ಮಲವಂತಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಗೆ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.