ಸ್ವಯಂ ಪ್ರೇರಿತ ಲಾಕ್ ಡೌನ್: ಮಡಂತ್ಯಾರಿನಲ್ಲಿ ಬೆಂಬಲ

 

 

 

       ಮಡಂತ್ಯಾರು: ಮಡಂತ್ಯಾರು ಗ್ರಾಮ ಪಂಚಾಯತು ಇದರ ನೇತೃತ್ವದಲ್ಲಿ ವತ೯ಕರ ಸಂಘ ಮಡಂತ್ಯಾರು ಮತ್ತು ಪುಂಜಾಲಕಟ್ಟೆ , ರಿಕ್ಷಾ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ 15 ದಿನಗಳ ಕಾಲ ಮಧ್ಯಾಹ್ನ ನಂತರ ಸ್ವಯಂ ಪ್ರೇರಿತ ಲಾಕ್ ಡೌನ್ ಗೆ  ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕೈಗೊಳ್ಳುವ ಅಂತಿಮ ತೀರ್ಮಾನಕ್ಕೆ ಬದ್ದವಾಗಿರಲು ಸಹಮತ ವ್ಯಕ್ತವಾಯಿತು
ಸಭೆಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ವತ೯ಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ಅನಿಲ್ ಅಧಿಕಾರಿ , ಮಾಜಿ ಸದಸ್ಯರಾದ ಕಿಶೋರ್ ಕುಮಾರ್, ಕಾಂತಪ್ಪ ಗೌಡ, ರಿಕ್ಷಾ ಚಾಲಕ ಮಾಲಕ ಸಂಘದವರು, ವತ೯ಕರು ಉಪಸ್ಥಿತರಿದ್ದರು.
ಸಭೆಯಲ್ಲಿ 15 ದಿನಗಳ ಮಧ್ಯಾಹ್ನ 2 ಗಂಟೆಯ ನಂತರ.ನಡೆಯುವ ಸ್ವಯಂ ಪ್ರೇರಿತ ಲಾಕ್ ಡೌನ್ ಗೆ ಬೆಂಬಲ ವ್ಯಕ್ತವಾಯಿತು. ಹೋಟೇಲ್ ಮತ್ತು ಸಲೂನ್ ಗಳಿಗೆ ಸಂಜೆ ಸಮಯ ವ್ಯಾಪಾರ.ಇರುವುದರಿಂದ ಅವರಿಗೆ ರಿಯಾಯತಿ ನೀಡಲು ನಿರ್ಧರಿಸಲಾಯಿತು. ಪೇಟೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡುವುದೆಂದೂ, ಮಾಸ್ಕ್ ಇಲ್ಲದವರಿಗೆ ದಂಡನೆ ವಿಧಿಸುವ ಜತೆಗೆ ವ್ಯಾಪಕ ಮಾಹಿತಿ ಕರಪತ್ರ ಹಂಚಲು ನಿರ್ಣಯಿಸಲಾಯಿತು. ಪಿಡಿಒ ನಾಗೇಶ್ ಎಂ. ಕಾಯ೯ಕ್ರಮ ನಿವ೯ಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.