HomePage_Banner_
HomePage_Banner_

ಹೊಸಪಟ್ಣ: ಶಿಥಿಲಗೊಂಡ ಕಿರುಸೇತುವೆ; ಸಂಚಾರ ಅಪಾಯದಲ್ಲಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ವೇಣೂರಿನಿಂದ ಬಂಟ್ವಾಳ ತಾಲೂಕಿನ ನೈನಾಡುವಿಗೆ ಸಂಪರ್ಕಿಸುವ ಹೊಸಪಟ್ಣದ ಕಿರುಸೇತುವೆಯು ಶಿಥಿಲವಸ್ಥೆಗೆ ತಲುಪಿದ್ದು, ಸಂಚಾರಕ್ಕೆ ಅಪಾಯ ತಂದೊಡ್ಡಿದೆ.
ನಿರ್ಮಾಣ ಆಗಿ 64 ವರ್ಷಗಳು ಕಳೆದ ಈ ಕಿರುಸೇತುವೆಗೆ ದಶಕಗಳಿಂದ ಡಾಮಾರು ಕಂಡಿಲ್ಲ. ಡಾಮಾರು ಕಿತ್ತು ಹೋಗಿ ದೊಡ್ಡ ದೊಡ್ಡ ಹೊಂಡ ನಿರ್ಮಾಣ ಆಗಿದ್ದು, ಪ್ರಯಾಣಿಕರಿಗೆ ಅಪಾಯ ತಂದೊಡ್ಡಿದೆ. ಅಲ್ಲದೆ ಸೇತುವೆಯ ಎರಡೂ ಬದಿಯ ತಡೆಗಳು ತುಂಡಾಗಿದೆ. ಈ ಹಿಂದೆ ಮೂರು ವಾಹನಗಳು ನಿಯಂತ್ರಣ ತಪ್ಪಿ ನದಿಗೆ ಬಿದ್ದಿರುವ ನಿದರ್ಶನ ಇದ್ದು, ಅಗಲವೂ ಬಹಳಷ್ಟು ಕಿರಿದಾಗಿರುವುದು ಇದಕ್ಕೆ ಕಾರಣ ಆಗಿದೆ ಎನ್ನಲಾಗಿದೆ. ಮತ್ತೊಮ್ಮೆ ಅಪಾಯ ಸಂಭವಿಸುವ ಮೊದಲು ಈ ಕಿರುಸೇತುವೆಗೆ ಡಾಮಾರು ಹಾಕಿ ದುರಸ್ತಿಗೊಳಿಸಬೇಕು ಇಲ್ಲವೇ ಈ ಭಾಗದಲ್ಲೇ ನೂತನ ಕಿರುಸೇತುವೆಯನ್ನು ನಿರ್ಮಿಸಬೇಕೆಂಬ ಆಗ್ರಹ ಇಲ್ಲಿನ ನಾಗರಿಕರಿಂದ ಕೇಳಿ ಬಂದಿದೆ.

ಹೊಸಪಟ್ಣಕ್ಕೆ ಸಂಪರ್ಕಿಸುವ ವೇಣೂರಿನಿಂದ ಮುದ್ದಾಡಿವರೆಗಿನ ರಸ್ತೆ ಮರು ಡಾಮರು ಕಾಮಗಾರಿಗೆ ಈಗಾಗಲೇ ಶಾಸಕರು ಅನುದಾನ ಮಂಜೂರುಗೊಳಿಸಿದ್ದಾರೆ. ಇದಕ್ಕೂ ಮೊದಲು ಮಳೆಗಾಲದ ಸಂಚಾರಕ್ಕೆ ಯೋಗ್ಯವಾಗುವಂತೆ ತಾತ್ಕಾಲಿಕವಾಗಿ ಈ ರಸ್ತೆಯನ್ನು ದುರಸ್ತಿ ಮಾಡಲಾಗುತ್ತಿದೆ. ಈ ವೇಳೆ ಹೊಸಪಟ್ಣದ ಸೇತುವೆ ರಸ್ತೆಯನ್ನೂ ಸಂಚಾರಕ್ಕೆ ಯೋಗ್ಯವಾಗುವಂತೆ ದುರಸ್ತಿ ಮಾಡಲಾಗುವುದು.
ಅರುಣ್ ಕ್ರಾಸ್ತ, ನಿಯೋಜಿತ ಅಧ್ಯಕ್ಷರು
ಗ್ರಾ.ಪಂ. ವೇಣೂರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.