ಕಳೆಂಜ: ಇಲ್ಲಿಯ ಕಾಯಡ ಶ್ರೀಧರ ರಾವ್ ರವರ ಮೇದಿನಿ ಫಾರ್ಮ್ಸ್ ನಲ್ಲಿ ಮಕ್ಕಳು ಹಾಗೂ ಸ್ಥಳೀಯರಿಂದ ಭತ್ತ ನಾಟಿ ಕಾರ್ಯಕ್ರಮವು ಜು.10 ರಂದು ವಿನೂತನ ರೀತಿಯಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ದ.ಕ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮೋಹನಗೌಡ ಕಲ್ಮಂಜ, ಬೆಳ್ತಂಗಡಿ ಕಿಸಾನ್ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ದಿನೇಶ್ ಕೋಟ್ಯಾನ್ ಬೆಳಾಲು, ಬೆಳ್ತಂಗಡಿ ನಗರ ಕಿಸಾನ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಬಿ. ಲಕ್ಷ್ಮಣ ಪೂಜಾರಿ, ಕಿಸಾನ್ ಕಾಂಗ್ರೆಸ್ ನಗರ ಬ್ಲಾಕ್ನ ಕಾರ್ಯದರ್ಶಿ ಥಾಮಸ್, ಬೆಳ್ತಂಗಡಿ ಕಿಸಾನ್ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಉಪಾಧ್ಯಕ್ಷ ಕೇಶವ ಗೌಡ ಕಳೆಂಜ, ಕಳೆಂಜ ಗ್ರಾ.ಪಂ. ಮಾಜಿ ಸದಸ್ಯ ಪ್ರವೀಣ್, ನಿಡ್ಲೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಧನಂಜಯ ಗೌಡ, ಬೆಳ್ತಂಗಡಿ ಎಲ್.ಡಿ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ಸಂತೋಷ್ ಜೈನ್, ನಿಡ್ಲೆ ಸಹಕಾರಿ ಸಂಘದ ನಿರ್ದೇಶಕರಾದ ಟಿ.ಎಸ್ ನಿತ್ಯಾನಂದ ರೈ, ಗದ್ದೆಯ ಮಾಲಕರಾದ ಶ್ರೀಧರ ರಾವ್ , ಹರೀಶ್ ರಾವ್ ,ನಿಡ್ಲೆ ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಕಳೆಂಜ ಗ್ರಾ.ಪಂ ಮಾಜಿ ಸದಸ್ಯ ಪ್ರವೀಣ್ ಬಟ್ಯಾಲು, ನಿಡ್ಲೆ ಗ್ರಾ.ಪಂ ಮಾಜಿ ಸದಸ್ಯ ಗುರುವ ನೇಳ್ಯಪಳಿಕೆ, ನಿಡ್ಲೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ,ನಿಡ್ಲೆ ಸಹಕಾರಿ ಸಂಘದ ಮಾಜಿ ನಿರ್ಧೇಶಕ ವಸಂತ ಪೂಜಾರಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ವೃಕ್ಷವರ್ಧನ್, ಧರ್ಮರಾಜ ಜೈನ್ ವಳಂಬಳ, ಪ್ರಗತಿಪರ ಕೃಷಿಕರಾದ ಶ್ರೀಮತಿ ಭಾರತಿ ವಳಂಬಳ, ಕಳೆಂಜ ಸದಾಶಿವೇಶ್ವರ ದೇವಸ್ಥಾನದ ಕಾರ್ಯದರ್ಶಿ ರುಕ್ಮಯ ಗೌಡ, ಸುಬ್ರಾಯ ಗೌಡ ಕೊಡಂಗೆ, ಈರಪ್ಪ ಗೌಡ ಪಿಲ್ಯಡ್ಕ, ಅಕ್ಷತ್ ರೈ ಪಾದೆ, ಸಂಜೀವ ನಾಯ್ಕ ಕಳೆಂಜ, ಶಾಲೆತಡ್ಕ ಹಾ.ಉ.ಸ.ಸಂಘದ ಅಧ್ಯಕ್ಷ ಹರೀಶ್ ರಾವ್ ಕಾಯಡ ಮತ್ತಿತರರು ಉಪಸ್ಥಿತರಿದ್ದರು.
ಕಿಸಾನ್ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀಧರ ರಾವ್ ಕಾಯಡ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.