ಗೇರುಕಟ್ಟೆ : ಇಲ್ಲಿಯ ಕಳಿಯ ಪಂಚಾಯತು ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಬಗ್ಗೆ ವರ್ತಕರ ಸಮಾಲೋಚನಾ ಸಭೆ ಗ್ರಾಮ ಪಂಚಾಯತು ಸಭಾಂಗಣ ದಲ್ಲಿ ಜು.10 ರಂದು ಪೂರ್ವಾಹ್ನ ನಡೆಯಿತು.
ಕಳಿಯ ಪಂಚಾಯತು ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಕಳಿಯ ಪಂಚಾಯತು ವ್ಯಾಪ್ತಿಯ ವರ್ತಕರ ಸಮಾಲೋಚನಾ ಸಭೆಯಲ್ಲಿ ಪೂರ್ವಾಹ್ನ 6 ರಿಂದ ಮಧ್ಯಾಹ್ನ 2 ಗಂಟೆ ಅವಧಿಯ ವರೆಗೆ ತೆರದು ನಂತರ ಸ್ವಯಂ ಪ್ರೇರಿತ ಬಂದ್ ಮಾಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಗೇರುಕಟ್ಟೆ ವರ್ತಕರು,ಅಟೋ ಚಾಲಕ-ಮಾಲಕರು,ಹೊಟೇಲ್ ,ಬೇಕರಿ, ಸಲೂನ್, ಮೀನು- ಮಾಂಸದ ಅಂಗಡಿಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು. ಪಂಚಾಯತ್ ಕಾರ್ಯದರ್ಶಿ ಕುಂಞ ಸ್ವಾಗತಿಸಿ ದನ್ಯವಾದವಿತ್ತರು.