ಬೆಳ್ತಂಗಡಿ: ಇಲ್ಲಿನ ಮಹಾತ್ಮಗಾಂಧಿ ವಾಣಿಜ್ಯ ಸಂಕೀರ್ಣ ಸಂತೆಕಟ್ಟೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಆರ್ .ಎನ್. ವೆಜಿಡೆಬಲ್ಸ್ & ಫ್ರೂಟ್ಸ್ ಇದರ ಶುಭಾರಂಭವು ಜು 10 ರಂದು ನಡೆಯಿತು. ಮುಂಡೂರು ಶ್ರೀ ನಾಗಕಲ್ಲುರ್ಟಿ ದೇವಸ್ಥಾನದ ಮೊಕ್ತೇಶರರಾದ ರಾಜೀವ ಅವರು ಪೂಜೆ ನೇರವೆರಿಸಿ ದೀಪ ಬೆಳಗಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ,ಅರುಣ್ ಕುಮಾರ್ ಸವಣಾಲು,ಪ್ರತಾಪ್ ಕುಕ್ಕುಜೆ ,ಯೋಗೀಶ್ ಕುಕ್ಕುಜೆ,ಪ್ರಕಾಶ್,ವಸಂತ ಕುಕ್ಕುಜೆ ಉಪಸ್ಥಿತರಿದ್ದರು. ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಉದಯ ಪೂಜಾರಿ ,ತಿವನ್ ಕುಮಾರ್ ಕುಕ್ಕುಜೆ ಸ್ವಾಗತಿಸಿ, ಸತ್ಕರಿಸಿದರು.