ಕಲ್ಲೇರಿ: ತಣ್ಣೀರುಪಂತ ಅಳಕೆ ಎಂಬಲ್ಲಿ ರಿಕ್ಷಾ ಚಾಲಕ-ಮಾಲಕರ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರು 2.5 ಲಕ್ಷ ರೂ ಅನುದಾನದಿಂದ ನಿರ್ಮಿಸಲಾಗಿರುವ ರಿಕ್ಷಾ ತಂಗುದಾಣ ಉದ್ಘಾಟನೆ ಜು.4 ರಂದು ನಡೆಯಿತು.
ಬೆಳ್ತಂಗಡಿ ಮಾಜಿ ಶಾಸಕರಾದ ಕೆ.ವಸಂತ ಬಂಗೇರ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿಸೋಜ ಮಾತನಾಡಿ ಈ ಭಾಗದ ಜನರು ಮತ್ತು ರಿಕ್ಷಾ ಚಾಲಕರು ಬಹು ದಿನದಿಂದ ಒಂದು ಬೇಡಿಕೆ ಇಟ್ಟಿದರು. ಅದು ಇವತ್ತು ನಿಮ್ಮೆಲ್ಲರ ನಿರೀಕ್ಷೆಯಂತೆ ಈಡೇರಿದೆ ಎಂದರು. ವಿಧಾನಪರಿಷತ್ತು ಸದಸ್ಯರಾದ ಹರೀಶ್ ಕುಮಾರ್ ಮಾತನಾಡಿ ರಿಕ್ಷಾ ಚಾಲಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಂಗುದಾಣ ವಿಸ್ತರಣೆಗೆ ಹೆಚ್ಚುವರಿ ಅನುದಾನ ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್, ತಣ್ಣೀರುಪಂತ ತಾಲೂಕು ಪಂಚಾಯತು ಸದಸ್ಯೆ ಕೇಶವತಿ, ತಣ್ಣೀರುಪಂತ ಗ್ರಾಮ ಪಂಚಾಯತು ಅಧ್ಯಕ್ಷ ಜಯವಿಕ್ರಮ್, ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ಆನಂದ, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಸದಾನಂದ ಶೆಟ್ಟಿ, ಐಯೂಬ್, ನವೀನ್ ಕುಮಾರ್, ತಾಜುದ್ದಿನ್, ಆದಂ, ಅಧ್ಯಕ್ಷರಾದ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು. ಸಂಘದ ಗೌರವ ಅಧ್ಯಕ್ಷ ಯೋಗೀಶ್ ಅಳಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.