ಬೆಳ್ತಂಗಡಿ : ಪೊಲೀಸ್ ಠಾಣಾ ವ್ಯಾಪ್ತಿಯ ಲಾಯಿಲ ಕಕ್ಕೇನ ನಿವಾಸಿ ಮಹಿಳೆ ನೀಡಿದ ದೂರಿನಂತೆ ಎಲ್. ಮಂಜುನಾಥ್ ಲಾಯಿಲ ಎಂಬವರ ಮೇಲೆ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ತನಗೆ ಮದುವೆಯಾಗಿಲ್ಲವೆಂದು ಮಂಜುನಾಥ ನಂಬಿಸಿ ಮೋಸದಿಂದ 2016 ನೇ ಇಸವಿಯಲ್ಲಿ ಮದುವೆಯಾಗಿ ಬಳಿಕ 2 ಲಕ್ಷ ಹಣ ಹಾಗೂ ಬ್ಯಾಂಕಿನಿಂದ 3 ಲಕ್ಷ ಸಾಲ ಪಡೆದು ವ್ಯವಹಾರ ಪ್ರಾರಂಭಿಸಿ ಅದರಿಂದ ಬಂದ ಹಣವನ್ನು ಪಿರ್ಯಾದಿದಾರರಿಗೆ ನೀಡದೇ ತನ್ನ ಮೊದಲ ಎರಡು ಪತ್ನಿಯರಿಗೆ ನೀಡುತ್ತಿದ್ದುದ್ದನ್ನು ಪ ಪ್ರಶ್ನಿಸಿದ್ದಕ್ಕೆ ನಾನ ರೀತಿಯ ಹಿಂಸೆ ನೀಡಿ ತೊಂದರೆ ನೀಡಿದ್ದಲ್ಲದೇ ಜೀವ ಬೆದರಿಕೆ ಒಡ್ಡಿರುವುದಾಗಿದೆ. ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಬಗ್ಗೆ ಜು.9 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ.48/2020 ಕಲಂ: 417,420,506,498(ಎ) IPC ಯಂತೆ ಪ್ರಕರಣ ದಾಖಲಾಗಿರುತ್ತದೆ.