ಕೊರೊನಾ ತಡೆಗೆ ಶಾಸಕ ಪೂಂಜ ನೇತೃತ್ವದಲ್ಲಿ ವಿಶೇಷ ಕಾರ್ಯತಂತ್ರ; ಮಧ್ಯಾಹ್ನ ನಂತರ ಲಾಕ್‌ಡೌನ್ ಜು.11 ಶನಿವಾರ ನಿರ್ಧಾರ

Advt_NewsUnder_1
Advt_NewsUnder_1

ತಾಲೂಕಿನಲ್ಲಿ ಕೊರೊನಾ ಹಬ್ಬುತ್ತಿರುವ ಕಾರಣ ಅದನ್ನು ಬೆಳ್ತಂಗಡಿ ತಾಲೂಕಿನಲ್ಲಿ ನಿಯಂತ್ರಣ ಮಾಡಲು ನಾಗರಿಕರು ಸ್ವಯಂ ಆಗಿ ಏನಾದರೂ ಮಾಡಲು ಸಾಧ್ಯವೇ ಎಂಬ ಬಗ್ಗೆ ಚರ್ಚಿಸಲು ಜು.೮ರಂದು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಮಾಲೋಚನಾ ಸಭೆ ನಡೆಯಿತು.


ತಾಲೂಕಿನಾದ್ಯಂತ ಪ್ರತಿದಿನ ಮಧ್ಯಾಹ್ನ ನಂತರ ಅಂಗಡಿ ಮುಂಗಟ್ಟುಗಳನ್ನು ಹಾಗೂ ವಾಹನ ಓಡಾಟವನ್ನು ಬಂದ್ ಮಾಡಲು ಜನರು ಸ್ವಯಂ ಪ್ರೇರಿತವಾಗಿ ಮುಂದೆ ಬರುವ ಬಗ್ಗೆ ಪಂಚಾಯತ್‌ವಾರು ಚರ್ಚಿಸಿ ಜು.೧೧ ಶನಿವಾರದಂದು ತಾಲೂಕು ಮಟ್ಟದ ದೊಡ್ಡ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಯಿತು.

ಜು.೮ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು. ತಹಶೀಲ್ದಾರ್ ಮಹೇಶ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯರಾಮ ಕೆ.ಇ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಪಾಟೀಲ್ ಕಳಿಯ, ಪೂರ್ಣಿಮಾ ತಣ್ಣೀರುಪಂಥ, ನಾಗೇಶ್ ಮಡಂತ್ಯಾರು, ವೆಂಕಟಕೃಷ್ಣರಾಜ್ ವೇಣೂರು, ರಾಘವೇಂದ್ರ ಪಾಟೀಲ್ ಮಾಲಾಡಿ, ಇಮ್ತಿಯಾಜ್ ಅಳದಂಗಡಿ, ಪ್ರಕಾಶ್ ಶೆಟ್ಟಿ ನೊಚ್ಚ ಉಜಿರೆ ಮತ್ತು ಚಾರ್ಮಾಡಿ, ರವಿ ಎಸ್.ಎಂ ನಾರಾವಿ, ಸುಮ ಎ.ಎಸ್ ಮುಂಡಾಜೆ, ಶ್ರೀನಿವಾಸ ಡಿ ಕುವೆಟ್ಟು, ಉಮೇಶ್ ಧರ್ಮಸ್ಥಳ, ದೀಪಕ್ ರಾಜ್ ಕೊಕ್ಕಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಅಮ್ಮಿ, ಆರೋಗ್ಯ ನಿರೀಕ್ಷಕ ಗಿರೀಶ್, ಹಾಗೂ ಪತ್ರಕರ್ತರು, ಐ.ಎಂ.ಎ ಅಧ್ಯಕ್ಷ ಡಾ| ಮುರಳಿಕೃಷ್ಣ ಇರ್ವತ್ರಾಯ, ಡಾ. ಸಾತ್ವಿಕ್ ಜೈನ್ ಸಭೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.