ಬೆಳ್ತಂಗಡಿ: ಇಲ್ಲಿಯ ಪಟ್ಟಣ ಪಂಚಾಯತ್ ಬಳಿ ಮಂಜುನಾಥ ಕಾಂಪ್ಲೆಕ್ಸ್ನಲ್ಲಿ ಕಾರ್ಯಚರಿಸುತ್ತಿದ್ದ ಕಛೇರಿಯನ್ನು ಬೆಳ್ತಂಗಡಿ ಸಂತೆಕಟ್ಟೆ ಬಳಿ ಪ್ರಜ್ವಲ್ ಕಾಂಪ್ಲೆಕ್ಸ್ಗೆ ಜು.೯ ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಇಂದಬೆಟ್ಟು ಚರ್ಚ್ನ ಧರ್ಮಗುರುಗಳಾದ ವಂ.ಫಾ| ಸ್ಟೀವನ್ ಡಿಸೋಜ ರಿಬ್ಬನ್ ಕತ್ತರಿಸಿ ಅಶೀರ್ವಚನ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭ ಇಂದಬೆಟ್ಟು ಚರ್ಚ್ ಪಾಲನ ಮಂಡಳಿಯ ಕಾರ್ಯದರ್ಶಿ ಜೋಕಿಂ ಡಿಸೋಜ, ವಿನ್ಸೆಂಟ್ ಡಿಸೋಜ, ಡೆನಿಟಾ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು. ಇಲ್ಲಿ ಹೊಸ ಎಲ್ಐಸಿ ಪಾಲಿಸಿ ಮತ್ತು ಸೇವೆ, ವಾಹನಗಳ ಇನ್ಶೂರೆನ್ಸ್ ಅಧಿಕೃತ ಪ್ರೀಮಿಯಂ ಕಲೆಕ್ಷನ್ ಸೆಂಟರ್, ಆರೋಗ್ಯವೆ ಭಾಗ್ಯ ಎಂಬಂತೆ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಹೊಸ ಪಾಲಿಸಿ ಮತ್ತು ಸೇವೆ, ಅಲ್ಲದೆ ಜೆರಾಕ್ಸ್, ಕಲರ್ ಜೆರಾಕ್ಸ್, ಲ್ಯಾಮಿನೇಷನ್, ಮೊಬೈಲ್ ಫೋಟೋ ಪ್ರಿಂಟ್, ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಪಾನ್ ಕಾರ್ಡ್, ಇಂಟರ್ನೆಟ್, ಸ್ಕ್ಯಾನಿಂಗ್, ಆರ್ಟಿಸಿ ಸೇವೆ ಇಲ್ಲಿ ಲಭ್ಯವಿದೆ ಎಂದು ಮಾಲಕ ಇನ್ಶೂರೆನ್ಸ್ ಚೀಫ್ ಎಡ್ವಯ್ಜರ್ ಫ್ರೆಡ್ರಿಕ್ ರೊಡ್ರಿಗಸ್ ತಿಳಿಸಿದ್ದಾರೆ