ವೇಣೂರು: ಇಲ್ಲಿಯ ನಾರಾವಿ ರಸ್ತೆಯ ಶ್ರೀರಾಮ ನಗರ ಕೆಳಗಿನ ಪೇಟೆ ಜೋಗಿಲಬೆಟ್ಟು ಕಾಂಪ್ಲೆಕ್ಸ್ನಲ್ಲಿ ‘ಜೋಗಿಲಬೆಟ್ಟು ಕಮ್ಯುನಿಕೇಶನ್ಸ್’ ಆನ್ಲೈನ್ ಸೇವಾ ಕೇಂದ್ರದ ಶುಭಾರಂಭವನ್ನು ತಂತ್ರಿಗಳಾದ ಉದಯ ಪಾಂಗಣ್ಣಾಯ ಪಾಂಗಲ್ಪಾಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭ ಮಾಲಕರ ತಾಯಿ ಶ್ರೀಮತಿ ಅಪ್ಪಿ, ಕಾಂಪ್ಲೆಕ್ಸ್ನ ಮಾಲಕರಾದ ಮೋನಪ್ಪ ಗೌಡ, ಪೆರಿಂಜೆ ಸ.ಹಿ.ಪ್ರಾ. ಶಾಲಾ ಶಿಕ್ಷಕ ವಿಶ್ವನಾಥ ಗೌಡ ಜೋಗಿಲಬೆಟ್ಟು, ಸಾಯಿ ಟೆಕ್ಸ್ಟೈಲ್ಸ್ನ ಮಾಲಕರಾದ ತಿಲಕ್ ಕೆ.ಎಸ್., ಸೀತಾರಾಮ ಪ್ರಿಂಟರ್ಸ್ನ ಗಿರೀಶ್ ಕೆ.ಎಸ್. ಮತ್ತಿತರರು ಉಪಸ್ಥಿತರಿದ್ದರು. ಬಂದಂತಹ ಅತಿಥಿಗಳನ್ನು ಮಾಲಕರಾದ ಆನಂದ ಗೌಡ, ಶ್ರೀಮತಿ ವಾಣಿ ಜೆ. ಸತ್ಕರಿಸಿದರು. ಶ್ರೀಮತಿ ಜಯಂತಿ ಹಾಗೂ ಶ್ರೀಮತಿ ನಾಗವೇಣಿ ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಜೆರಾಕ್ಸ್, ಕಲರ್ ಪ್ರಿಂಟ್, ಲ್ಯಾಮಿನೇಷನ್, ಆರ್ಟಿಸಿ ಪ್ರಿಂಟ್, ಜಾತಿ, ಆದಾಯ ದೃಢಪತ್ರ, ಪಾನ್ಕಾರ್ಡ್, ಕನ್ನಡ, ಇಂಗ್ಲೀಷ್ ಟೈಪಿಂಗ್, ಡಿಟಿಪಿ ವರ್ಕ್, ಸ್ಕಾಲರ್ಶಿಪ್ ಅರ್ಜಿಗಳು, ಹಾಗೂ ಇನ್ನಿತರ ಖಾಸಗಿ ಹಾಗೂ ಸರಕಾರಿ ಆನ್ಲೈನ್ ಸೇವೆಗಳು, ಆರ್ಸಿ, ಲೈಸೆನ್ಸ್ ಪಿವಿಸಿ ಕಾರ್ಡ್ ಮಾಡಿಕೊಡಲಾಗುವುದು. ಎಲ್ಲಾ ತರಹದ ವಾಹನಗಳ ಇನ್ಸೂರೆನ್ಸ್ ಪಾವತಿ, ಇನ್ನಿತರ ಸೌಲಭ್ಯಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.