ಬೆಳ್ತಂಗಡಿ: ಮಂಗಳೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 73 ರ ಮುಂಡಾಜೆ ಸೋಮಂತಡ್ಕ ಸಮೀಪದ ಅಂಬಡ್ತ್ಯಾರು ಎಂಬಲ್ಲಿ ರಸ್ತೆಗೆ ಬೃಹದಾಕಾರದ ಮರ ಬಿದ್ದ ಕಾರಣ ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ಜು.9 ರಂದು ಬೆಳಿಗ್ಗೆ ನಡೆದಿದೆ.
ಮುಂಜಾನೆ ಸುಮಾರಿಗೆ 6.45 ಸುಮಾರಿಗೆ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದಿದೆ. ಮರಬಿದ್ದ ಕಾರಣ ಕೆಲವು ವಾಹನಗಳು ಬದಲಿ ಗುಂಡಿ ರಸ್ತೆಯಲ್ಲಿ ಸಂಚಾರ ಮುಂದುವರಿಸಿದವು. ಮರ ರಸ್ತೆಗೆ ಉರುಳಿರುವುದರಿಂದ ವಿದ್ಯುತ್ ತಂತಿಗೆ ಹಾನಿ ಯಾಗಿದೆ.
ರಸ್ತೆಯಲ್ಲೆ ಬಾಕಿತಾದ ಶಾಸಕ ಸುನಿಲ್ ಕುಮಾರ್
ಇದೇ ರಸ್ತೆಯ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೂಡಾ ರಸ್ತೆ ಮರ ಬಿದ್ದ ಕಾರಣ ಸಮಸ್ಯೆಗೆ ಸಿಲುಕಿಕೊಂಡರು. ಸುನಿಲ್ ಕುಮಾರ್ ಅವರು ಸ್ಥಳೀಯ ಶಾಸಕ ಹರೀಶ್ ಪೂಂಜರ ನೆರವಿನಿಂದ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕರೆಸಿ ಮರಗಳನ್ನು ತೆರವು ಮಾಡಿದರು.