ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪ್ರಾಯೋಜಿತ ಫಲ್ಗುಣಿ ತಂಡವನ್ನು ವಲಯ ಮೇಲ್ವಿಚಾರಕರಾದ ಗಿರೀಶ್ ಕುಮಾರ್ ಉದ್ಘಾಟಿಸಿ ಯೋಜನೆಯ ಮಹತ್ವ, ದಾಖಲಾತಿ ನಿರ್ವಹಣೆ,ಬಡ್ಡಿದರ,ಸ್ವ ಉದ್ಯೋಗ ಕಲ್ಪನೆ, ಸಬ್ಸಿಡಿ ಸಾಲಗಳ ಬಗ್ಗೆ ಮಾಹಿತಿ ನೀಡಿದರು. ತಂಡದ ಪ್ರಬಂಧಕರಾಗಿ ಅರುಣ್, ಸಂಯೋಜಕರಾಗಿ ಸುನಿಲ್,ಕೋಶಾಧಿಕಾರಿಯಾಗಿ ಗಣೇಶ್ ಇವರನ್ನು ಆಯ್ಕೆ ಮಾಡಲಾಯ್ತು. ಈ ಸಂಧರ್ಭದಲ್ಲಿ ಸೇವಾಪ್ರತಿನಿಧಿ ಹರಿಣಾಕ್ಷಿ, ಪಧಾದಿಕಾರಿ ವಿಜಯ ಉಪಸ್ಥಿತರಿದ್ದರು.