ತೆಕ್ಕಾರು: ತೆಕ್ಕಾರು ಗ್ರಾಮದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿರುವ ಮೂರು ಮಂದಿ ಆಶಾ ಕಾರ್ಯಕರ್ತೆಯರಿಗೆ ನಗದು ಪುರಸ್ಕಾರ ಸಹಿತ ಸನ್ಮಾನ, ಜೊತೆಗೆ ಸಹಕಾರ ಸಂಘದ ಪಡಿತರ ವಿತರಣಾ ನವೀಕೃತ ಕಟ್ಟಡದ ಉದ್ಘಾಟನೆಯನ್ನು ಇತ್ತೀಚೆಗೆ ನೆರವೇರಿಸಲಾಯಿತು. ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ ಅಬ್ದುಲ್ ರಝಾಕ್ ತೆಕ್ಕಾರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ದಲ್ಲಿ ಸಂಘದ ಉಪಾಧ್ಯಕ್ಷ ನಾಭಿರಾಜ ಹೆಗ್ಡೆ ಮರಮ, ನಿರ್ದೇಶಕರಾದ ಹುಸೈನ್ ಬಾಗ್ಲೋಡಿ, ಎನ್.ಎಚ್ ಅಬ್ದುಲ್ ರಹಮಾನ್, ಶೇಖರ್ ಪೂಜಾರಿ ಆನಲ್ಕೆ, ಜನಾರ್ದನ ಪೂಜಾರಿ ಮರಮ, ಶಿವಪ್ಪ ಪೂಜಾರಿ ಬೇನಪ್ಪು, ನೆಬಿಸಾ. ಗ್ರಾ.ಪಂ ಪಿಡಿಒ ಸುಮಯ್ಯ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಘವೇಂದ್ರ ಅಡಪ, ಇವರಿಗಳು ಭಾಗಿಯಾಗಿ ಶುಭಕೋರಿದರು