ಬೆಳ್ತಂಗಡಿ: ಇಲೆಕ್ಟ್ರಾನಿಕ್ಸ್ ಮತ್ತು ಪೀಠೋಪಕರಣ ಮಾರಾಟ ಸೇವೆಯಲ್ಲಿ ತಾಲೂಕಿನ ಹಿರಿಯ ಮಳಿಗೆಯಾಗಿದ್ದು ಈ ವರ್ಷ ಬೆಳ್ಳಿಹಬ್ಬ ಆಚರಿಸುತ್ತಿರುವ ಸೋಜಾ ಇಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇದರ ನೌಕರರಿಗೆ ಬೆಳ್ಳಿಹಬ್ಬ ಪ್ರಯುಕ್ತ ಗಾಯನ ಸ್ಪರ್ಧೆ ಜು.7 ರಂದು ನಡೆಯಿತು.
ಈ ಸ್ಪರ್ಧೆಯ ತೀರ್ಪುಗಾರರಾಗಿ ನೇಷನಲ್ ಇನ್ಶ್ಯೂರೆನ್ಸ್ ಕಂಪೆನಿಯ ಅಭಿವೃದ್ಧಿ ಅಧಿಕಾರಿ ಜೋನ್ ಅರ್ವಿನ್ ಡಿ ಸೋಜಾ, ಧೂಮ್ ಧಮಾಕ ಜವಳಿ ಮಳಿಗೆಯ ಮಾಲಕ ಇಮ್ರಾನ್ ಅವರು ಭಾಗವಹಿಸಿದ್ದರು. ಸೋಜಾ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಆಡಳಿತ ಪಾಲುದಾರ ಆಲ್ಫೋನ್ಸ್ ಫ್ರಾಂಕೋ ಅಧ್ಯಕ್ಷತೆ ವಹಿಸಿದ್ದರು.
ಸ್ಫರ್ಧೆಯ ಪ್ರಥಮ ಬಹುಮಾನವನ್ನು ನಿಝಾಮ್, ದ್ವಿತೀಯ ಬಹುಮಾನವನ್ನು ಸ್ವಾತಿ ಮತ್ತು ರಾಝಿಕ್ ಅವರು ಪಡೆದುಕೊಂಡರು.
ಸಂಸ್ಥೆಯ ಆಡಳಿತಾಧಿಕಾರಿ ಲ್ಯಾನ್ಸಿ ಡಿ ಸೋಜಾ ಉಪಸ್ಥಿತರಿದ್ದರು. ವಿಶೇಷವಾಗಿ ನಿರ್ಣಾಯಕ ಜೋನ್ ಅರ್ವಿನ್ ಡಿ ಸೋಜಾ ಅವರು ಸುಮಧುರ ಗೀತೆಯನ್ನು ಹಾಡುವ ಮೂಲಕ ಮನರಂಜಿಸಿದರು.
ಬೆಳ್ಳಿ ಹಬ್ಬದ ಪ್ರಯುಕ್ತ ವರ್ಷದ ಕಾರ್ಯಕ್ರಮದ ವಿವರವನ್ನು ಸಂಸ್ಥೆಯ ಪಿಆರ್ಒ ದೀಪ್ತಿ ಬಂಗೇರ ನೀಡಿದರು. ಸಂಸ್ಥೆಯ ಕಷ್ಟಮರ್ ಕೇರ್ ಸ್ವಾತಿ ಧನ್ಯವಾದವಿತ್ತರು. ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಯವಾಯಿತು.