ಮಾಲಾಡಿ: ಅಸೌಖ್ಯದಿಂದ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತರಾದ ಮಾಲಾಡಿ ಗ್ರಾಮದ ಕುರಿಯಾಡಿ ದರ್ಖಾಸು ಮನೆ ನಿವಾಸಿ, ದಿ ಚೀಂಕ್ರ ಅವರ ಪತ್ನಿ ಕಮಲಾ(55ವ.) ಅವರ ಕುಟುಂಬದ ಆರ್ಥಿಕ ಸಮಸ್ಯೆ ಅರಿತು ಅವರ ಅಂತ್ಯಸಂಸ್ಕಾರ ವಿಧಿ ಪೂರೈಕೆಗೆ ಶಾಸಕ ಹರೀಶ್ ಪೂಂಜ ಆರ್ಥಿಕ ಸಹಕಾರ ನೀಡಿದರೆ, ಪುಂಜಾಲಕಟ್ಟೆ ಠಾಣಾ ಮುಖ್ಯಪೇದೆ ಸಂದೀಪ್ ಅವರು ಆಂಬುಲೆನ್ಸ್ ಒದಗಿಸಿ ನೆರವಾಗಿದ್ದಾರೆ.
ಕಮಲಾ ಅವರು ಅಸೌಖ್ಯದಿಂದ ಮೃತಪಟ್ಟರು. ಅವರ ಕೋವಿಡ್ ಪರೀಕ್ಷೆ ವರದಿ ಬರುವವರೆಗೆ ಮೃತದೇಹವನ್ನು ಬೆಳ್ತಂಗಡಿ ಚೃರ್ಚ್ ರೋಡ್ನ ಶೀಥಲೀಕೃತ ಶವಾಗಾರದಲ್ಲಿಡಲಾಗಿತ್ತು.
ರವಿವಾರ ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಈ ಎಲ್ಲಾ ಸಂದರ್ಭದಲ್ಲಿ ಮೃತರ ಕುಟುಂಬದ ಅರ್ಥಿಕ ಸಂಕಷ್ಟಕ್ಕೆ ಶಾಸಕರು ಮತ್ತು ಪೊಲೀಸ್ ಸಿಬ್ಬಂದಿ ನೆರವಾಗಿ ಮಾದರಿಯಾಗಿದ್ದಾರೆ.
ಜೊತೆಗೆ ಬಿಜೆಪಿ ಮುಖಂಡರಾದ ನಂದ ಕುಮಾರ್, ರೋಹಿ ಫ್ಯಾನ್ಸಿ ಸ್ಟೋರ್ಸ್ ಮಾಲಕ ರೋಹಿತ್ ಪೂಜಾರಿ ಅವರೂ ಕೂಡ ಸಹಕರಿಸಿದರು.
ಮೃತರ ಒಂಭತ್ತು ಮಕ್ಕಳ ಪೈಕಿ ಪುತ್ರಿ ಕಲ್ಯಾಣಿ ಈ ಹಿಂದೆಯೇ ಮೃತರಾಗಿದ್ದು, ಇದೀಗ ಮೃತರು ಉಳಿದ ಎಂಟು ಮಂದಿ ಮಕ್ಕಳಾದ ನಾರಾಯಣ, ಕೇಶವ, ಶೀನ,ವಿಶ್ವನಾಥ, ರವಿ, ರುಕ್ಮಯ್ಯ, ರಾಮಣ್ಣ ಮತ್ತು ದೇಜಮ್ಮ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.