ನೋಡಲು ಅಪರೂಪವಾಗಿರುವ ಗದ್ದೆ ಬೇಸಾಯ
ಭಾರತ ಕೃಷಿ ಪ್ರಧಾನ ದೇಶ.. ನಮ್ಮ ರೈತರು ದೇಶದ ರಕ್ಷಣೆ ಮಾಡುವ ಸೈನಿಕರಿಗೆ ಸಮಾನ
ಆದರೆ ಮನಸ್ಸಿಗೆ ಬೇಸರವಾಗುವ ವಿಷಯವೆಂದರೆ ಇತ್ತೀಚಿನ ದಿನಗಳಲ್ಲಿ ಕೃಷಿಗೆ ಪ್ರಾಧಾನ್ಯತೆ ಕಡಿಮೆಯಾಗುತ್ತಿದೆ.
ಒಟ್ಟಿಗೆ ಕೂಡಿ ಬಾಳುತಿದ್ದ ಕುಟುಂಬಗಳು ವಿಭಜನೆಯಾಗಿ ಒಗ್ಗಟ್ಟಿನ ಕೆಲಸ ಕಾರ್ಯಗಳು ಕಡಿಮೆಯಾಗಿದೆ. ಅಂತಹಾ ಸಂದರ್ಭದಲ್ಲಿ ಗಣೇಶ ಬಜಿಲ ಅವರು ಸ್ವವಯಂ ಭತ್ತದ ಕೃಷಿಯಲ್ಲಿ ನಿರತರಾಗುವ ಮೂಲಕ ರವಿವಾರದ ಲಾಕ್ ಡೌನ್ ದಿನವನ್ನು ತಮ್ಮ ಕುಟುಂಬದವರ ಜೊತೆ ಸೇರಿಕೊಂಡು ಸಫಲೀಕರಿಸಿಕೊಂಡಿದ್ದಾರೆ.
ರೈತರು ಎಷ್ಟೇ ಕಷ್ಟಪಟ್ಟು ಬೆಳೆ ಬೆಳೆದರು ಸರಿಯಾದ ಬೆಲೆ ಇರೋದಿಲ್ಲ. ಹೀಗಾಗಿ ರೈತರು ತನ್ನ ಭೂಮಿಯಲ್ಲಿ ಬೆಳೆ ಬೆಳೆಯಲು ಹಿಂದೆ ಸರಿಯುತ್ತಿರುವುದು ನೋಡುತ್ತಿದ್ದೇವೆ.
ಸರ್ಕಾರವು ರೈತರಿಗೆ ಅತಿ ಹೆಚ್ಚು ಪ್ರೋತ್ಸಾಹ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಮಾಡಿದ್ರೆ ಮಾತ್ರ ರೈತರು ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯ. ಬೆಳೆದ ಬೆಳೆಗೆ ದಲ್ಲಾಳಿಗಳಿಂದ ವಿಮುಕ್ತಿ ಗೊಳಿಸಿ ನಿಗದಿತ ಬೆಲೆ ಘೋಷಣೆಮಾಡಿದಾಗ ಮಾತ್ರ ರೈತನ ಬೆವರಿಗೆ ತಕ್ಕ ಪ್ರತಿಫಲ ದೊರೆಯುತ್ತದೆ. ಈಗಿನ ಯುವಕರಲ್ಲಿ ಕೃಷಿಯಲ್ಲಿ ಉತ್ಸಾಹ ಬರಲು ಸರ್ಕಾರವು ಇತರ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರೆ ಕೃಷಿಯು ಮರು ಜೀವಪಡೆದು ಕೊಳ್ಳಲು ಸಾಧ್ಯವಾಗುತ್ತದೆ ಎಂದು ಗಣೇಶ್ ಬಜಿಲ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ವರ್ಷ ಜಾರಿಗೆ ತಂದಿರುವ ಯಂತ್ರಶ್ರೀ ಯೋಜನೆ ಮೂಲಕ ಅದೆಷ್ಟೋ ಪಡೀಲು ಬಿದ್ದ ಗದ್ದೆಗಳ ಬೇಸಾಯವನ್ನು ನಿರ್ವಹಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಗೊಂಡು ಅನೇಕ ಯುವಕರಿಗೆ ಪ್ರೇರಣೆ ನೀಡಿದೆ ಎನ್ನುತ್ತಾರೆ ಅವರು.
ವರದಿ… ಮಾಧವ. M. ಮೇಲ್ವಿಚಾರಕರು.
ಎಸ್ಕೆಡಿಆರ್ಡಿಪಿ ಕಣಿಯೂರು ವಲಯ