ಮದ್ದಡ್ಕ: ಬೆಳ್ತಂಗಡಿ ತಾಲೂಕಿನ ಮದ್ದಡ್ಕ ನಿವಾಸಿ 28 ವರ್ಷದ ಯುವಕನಿಗೆ ಜು.6 ರಂದು ಕೊರೊನಾ ಸೋಂಕು ದೃಢವಾಗಿದೆ. ಡೆಂಗ್ಯೂ ಜ್ವರದ ಹಿನ್ನಲೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿಂದ ಮೂರ್ನಾಲ್ಕು ದಿನಗಳ ಹಿಂದೆ ಮನೆಗೆ ಮರಳಿದ್ದರು. ಅವರ ಗಂಟಲು ದ್ರವ ಪರೀಕ್ಷೆ ವರದಿ ಇಂದು ಬಂದಿದ್ದು, ಕೊರೊನಾ ಸೋಂಕು ದೃಢ ಪಟ್ಟಿದೆ. ಸೋಂಕಿತ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮನೆಯ ಇಲ್ಲಿದ್ದ ಐವರರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಇಂದು ಒಂದೇ ದಿನ ನಾಲ್ಕು ಕೊರೋನಾ ಪ್ರಕರಣ ಪತ್ತೆಯಾಗಿದೆ. ಸುಲ್ಕೇರಿ ಮೊಗ್ರು ಗ್ರಾಮದಲ್ಲಿ ಜು.2 ರಂದು ಬಾಂಬೆಯಿಂದ ಊರಿಗೆ ಬಂದಿದ್ದ 57 ವರ್ಷ ಹಾಗೂ 37 ವರ್ಷದ ಇಬ್ಬರು ವ್ಯಕ್ತಿ ಸುಲ್ಕೇರಿ ಮೊಗ್ರು ಶಾಲೆಯಲ್ಲಿ ಕ್ವಾರೆಂಟೈನ್ ನಲ್ಲಿದ್ದರು. ಅವರ ಗಂಟಲು ದ್ರವ ಪರೀಕ್ಷೆ ಬಂದಿದ್ದು ಕೊರೊನಾ ಸೋಂಕು ದೃಢವಾಗಿದೆ. ಬೆಳಿಗ್ಗೆ ಉಜಿರೆಯ ಪೆಟ್ರೋಲ್ ಪಂಪ್ ನ ಸಿಬ್ಬಂದಿಯೊಬ್ಬರಿಗೆ ಕೊರೋನಾ ದೃಢವಾಗಿತ್ತು. ನಂತರ ಮದ್ದಡ್ಕದ 28 ವರ್ಷದ ಯುವಕನಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು. ಹಾಗೆಯೆ ಈಗ ಸುಲ್ಕೇರಿಮೊಗ್ರಿನ ಇಬ್ಬರು ವ್ಯಕ್ತಿಗೆ ಸೋಂಕು ತಗುಲಿರುವ ಮೂಲಕ ಇಂದು ಒಂದೇ ದಿನ ನಾಲ್ಕು ಕೊರೋನಾ ಪ್ರಕರಣ ತಾಲೂಕಿನಲ್ಲಿ ಕಂಡು ಬಂದಂತಾಗಿದೆ.