ಕೊಕ್ಕಡ: ಬೆಂಗಳೂರು ರಾಜೀವ್ ಗಾಂಧಿ ಯುನಿವರ್ಸಿಟಿನ ಹೆಲ್ತ್ ಸೈನ್ಸ್ ನವರು ನಡೆಸಿದ ವಾರ್ಷಿಕ ಪರೀಕ್ಷೆಯಲ್ಲಿ ಹಾಸನದ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಯಾಗಿ ಅಂತಿಮ ಬಿ.ಎ.ಎಂ.ಎಸ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಕಾಲೇಜಿಗೆ ಮೊದಲಿಗಳಾಗಿದ್ದು, ಡಾ. ಶ್ರದ್ಧಾ ಜಿ.ಎಸ್ ರವರಿಗೆ ಗೋಲ್ಡ್ ಮೆಡಲ್ ದೊರೆತಿದೆ. ಇವರು ಕೊಕ್ಕಡ ಹಳ್ಳಿಂಗೇರಿ ಸುಂದರ ಗೌಡ ಬೇರಿಕೆ ಮತ್ತು ಶ್ರೀಮತಿ ಗೌರಿ ಸುಂದರ ಗೌಡ ದಂಪತಿಗಳ ಪುತ್ರಿಯಾದ ಕೊಕ್ಕಡ ಪಂಚಮಿ ಹಿತಾರ್ಯುಧಾಮದ ಡಾ. ಮೋಹನದಾಸ್ ಗೌಡ ಹಾಗೂ ಶ್ರೀಮತಿ ಪೂರ್ಣಿಮಾರವರ ಮೊಮ್ಮಗಳಾಗಿದ್ದಾರೆ.