ಕೆಸರುಮಯವಾದ ಬದನೋಡಿ- ನಡುಗುಡ್ಡೆ ರಸ್ತೆ; ಪೈಪ್ ಲೈನ್ ಕಾಮಗಾರಿಯಿಂದ ರಸ್ತೆ ಸಂಚಾರಕ್ಕೆ ತೊಡಕು

ಬೆಳ್ತಂಗಡಿ: ಮಚ್ಚಿನ ಗ್ರಾಮದ ಬದನೋಡಿ- ನಡುಗುಡ್ಡೆ ರಸ್ತೆಯು ಬಳಕೆ ಮಾಡಲಾಗದ ಪರಿಸ್ಥಿತಿಗೆ ತಲುಪಿದೆ. ಜುಲೈ 2 ರಂದು ಮಚ್ಚಿನ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಸಲಾಗಿದೆ ಬಳಿಕ ಮಳೆ ಬಂದಿದ್ದು, ನಡೆದುಕೊಂಡು ‌ಹೋಗಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳಂತೂ ಸಂಚರಿಸುವುದೇ ಕಷ್ಟಸಾಧ್ಯವಾಗಿದೆ. ದ್ವಿಚಕ್ರ ವಾಹನಗಳು ಜಾರಿ ಸವಾರರಿಗೆ ಕೆಸರಿನ ಲೇಪನವೂ ಆಗಿದೆ. ಸಂಚಾರ ದುಸ್ತರವಾಗಿರುವ ಕುರಿತು ಪಂಚಾಯತ್ ಗಮನಕ್ಕೆ ತರಲಾಗಿದೆ.


ರಸ್ತೆ ಸಂಪರ್ಕಿಸುವ ಮನೆಗಳ ಜನತೆ ಓಡಾಡಲೂ ಕಷ್ಟವಾಗಿದ್ದು ಮುಖ್ಯವಾಗಿ ಕೂಲಿ, ಡೈರಿಗೆ ಹಾಲು ತೆಗೆದುಕೊಂಡು ಹೋಗುವವರ ಸಂಕಷ್ಟವಾಗಿದೆ.ಮಳೆಗಾಲದಲ್ಲಿ ಇಂತಹ ಕಾಮಗಾರಿ ನಡೆಸಿ‌ ಸಾರ್ವಜನಿಕರಿಗೆ ಸಂಕಷ್ಟ ಉಂಟು ಮಾಡಿರುವ ಕುರಿತು ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಕೂಡಲೇ ಕ್ರಮಕೈಗೊಂಡು, ಸ್ಥಳೀಯರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.