ಕೊಯ್ಯೂರು: ಇಲ್ಲಿನ ಆದೂರ್ಪೆರಾಲ್ ವಿಜಯ ಕಾಂಪ್ಲೇಕ್ಸ್ನ ವಠಾರದಲ್ಲಿ ಜು.3 ಶುಕ್ರವಾರ ಏರ್ಟೆಲ್ ಪೇಮೆಂಟ್ ಬ್ಯಾಂಕಿನ ಶಾಖೆ ಉದ್ಘಾಟನೆಗೊಂಡಿತು. ಕೊಯ್ಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣಭಟ್ ಕೆ. ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಹಾಗೂ ಕೊಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೀವಿ ರೈ, ಸಾನ್ವಿ ಟ್ರೇಡರ್ಸ್ ಮಾಲಕ ವಿನಯ ಕೆ, ವಲಯ ವ್ಯವಹಾರ ಮುಖ್ಯಸ್ಥ ಸದಾನಂದ ಯು, ದ.ಕ ಜಿಲ್ಲೆ ವಲಯ ಮಾರಾಟಾಧಿಕಾರಿ ಶರತ್ ಕೆ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಸ್ಥೆಗೆ ಶುಭಹಾರೈಸಿದರು.
ಈ ಸಂದರ್ಭ ವೇದಿಕೆಯಲ್ಲಿ ಸಾನ್ವಿ ಟ್ರೇಡರ್ಸ್ ಮಾಲಕ ವಿನಯ್ ಕೆ., ಬೆಳ್ತಂಗಡಿ ಏರ್ಟೆಲ್ ವಿತರಕರು ಶ್ರೀನಿವಾಸ್, ಉಪಸ್ಥಿತರಿದ್ದರು. ವ್ಯವಸ್ಥಾಪಕ ಮಂಗಳೂರು ವಲಯ ಶರತ್ ಎಸ್, ಬೆಳ್ತಂಗಡಿ ಏರ್ಟೆಲ್ ಸಿಬ್ಬಂದಿಗಳು ಕೊಯ್ಯೂರು ಗ್ರಾಮಸ್ಥರು ಉಪಸ್ಥಿತರಿದ್ದರು. ಬೆಳ್ತಂಗಡಿ ವ್ಯವಸ್ಥಾಪಕ ಕಿರಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಧನ್ಯವಾದವಿತ್ತರು.