ಬೆಳಾಲು: ಕರ್ನಾಟಕ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪದಗ್ರಹಣ ನೇರ ವೀಕ್ಷಣೆ ಕಾರ್ಯಕ್ರಮ ಮೈತ್ರಿ ಯುವಕ ಮಂಡಲ ಸಭಾಂಗಣದಲ್ಲಿ ಜರಗಿತು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ ಡಿ ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮವು ಬೆಳಾಲು ಮೈತ್ರಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಪ್ರತಿಜ್ಞಾ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಜತ್ತಣ್ಣ ಗೌಡ ರವರು ದೀಪ ಬೆಳಗಿಸಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಕೋಟ್ಯಾನ್ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಗೌಡ ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಯಂತ್ ಗೌಡ, ದಯಾನಂದ ಪಿ, ಪ್ರವೀಣ್ ವಿಜಯ್, ಶ್ರೀಮತಿ ಪ್ರೇಮ ಶ್ರೀಮತಿ ವಿಮಲ, ಸಿ ಎ ಬ್ಯಾಂಕ್ ನ ನಿರ್ದೇಶಕರಾದ ವಿಜಯ್ ಗೌಡ, ಸುಲೈಮಾನ್ ಬೀಮಂಡೆ, ಹಾಲು ಉತ್ಪಾದಕ ಸಂಘದ ನಿರ್ದೇಶಕರುಗಳಾದ ಬಿರ್ಮಣ ಪೂಜಾರಿ, ಯುವರಾಜ್ ಗೌಡ, ವಿವಿಧ ಘಟಕಗಳ ಪದಾದಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ದಯಾನಂದ ಪಿ ಕಾರ್ಯಕ್ರಮ ನಿರ್ವಹಿಸಿ ಬೆಳಾಲು ಗ್ರಾಮ ಡಿಜಿಟಲ್ ಯೂತ್ ಪ್ರವೀಣ್ ವಿಜಯ್ ಧನ್ಯವಾದವಿತ್ತರು. ಸುಲೈಮಾನ್ ಬೀಮಂಡೆ ಎಲ್ಲರನ್ನು ಸ್ವಾಗತಿಸಿದರು