ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೇಸ್ ಗ್ರಾಮ ಸಮಿತಿಯ ವತಿಯಿಂದ ಕೆ.ಪಿಸಿಸಿ ನೂತನ ಅಧ್ಯಕ್ಷರ ಪದಪ್ರಧಾನ ಸಮಾರಂಭದ ಉದ್ಘಾಟನೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಪೂಜಾರಿ, ಕಾಂಗ್ರೇಸ್ ಉಜಿರೆ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀನಿವಾಸ್, ಉಜಿರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಗೌಡ ಕೂಡಿಗೆ, ಗ್ರಾ.ಪಂ. ಉಪಾಧ್ಯಕ್ಷೆ ವಿನುತಾ, ರಜತಗೌಡ, ಸದಸ್ಯರುಗಳಾದ ಇಲ್ಯಾಸ್ ಬಿ.ಎಂ.ನೀಲಯ್ಯ ಪೂಜಾರಿ, ಎಮಿಲ್ಡಾ ಡಿ.ಸೋಜಾ, ಕಮಲಾಕ್ಷಿ, ಚಿತ್ರಾಕ್ಷಿ, ನೀಲಮ್ಮ, ಪ್ರಕಾಶ, ತಾ.ಪಂ ಮಾಜಿ ಸದಸ್ಯ ವಸಂತ ಪೂಜಾರಿ, ಸಾಮಾಜಿಕ ಜಾಲತಾಣದ ಉಜಿರೆ ಗ್ರಾಮದ ಪ್ರಿಯದರ್ಶನ್ ವಿ.ಎನ್. ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು.