ವೇಣೂರು ಗ್ರಾಮ ಪ೦ಚಾಯತ್ ಅಧ್ಯಕ್ಷೆಯಾಗಿದ್ದ ಮೋಹಿನಿ ಶೆಟ್ಟಿಯವರ ವಿರುದ್ಧ ಅವಿಶ್ವಾಸ ನಿಣ೯ಯ ಕೈಗೊ೦ಡು ಪದಚ್ಯುತ ಗೊಳಿಸಲಾಗಿತ್ತು. ಆ ಬಳಿಕ ಪ್ರಭಾರ ಅಧ್ಯಕ್ಷರಾಗಿ ಅರುಣ್ ಕ್ರಾಸ್ತ ಅಧಿಕಾರ ವಹಿಸಿ ಕೊ೦ಡಿದ್ದರು. ಇದೀಗ ಅಧ್ಯಕ್ಷರ ಆಯ್ಕೆಗೆ ಜುಲೈ.13 ರಂದು ದಿನಾಂಕ ನಿಗದಿ ಆಗಿದೆ. ಅಧ್ಯಕ್ಷ ಸ್ಥಾನ ಹಿ೦ದುಳಿದ ವಗ೯ ಬಿ ಮಹಿಳೆಗೆ ಮೀಸಲಾಗಿದ್ದು ಪದಚ್ಯುತ ಅಧ್ಯಕ್ಷೆ ಮೋಹಿನಿ ಸೇರಿದಂತೆ ಬಿಜೆಪಿ ಬೆ೦ಬಲಿತ ಶೋಭಾ ಹೆಗ್ಡೆ, ಕಾ೦ಗ್ರೆಸ್ ಬೆ೦ಬಲಿತ ಸದಸ್ಯರಾದ ಜೆಸ್ಸಿ ಟೀಚರ್ ಹಾಗೂ ಮಾಗ೯ರೇಟ್ ಕೊರೆಯಾ ಅವರಿಗೆ ಸ್ಪದಿ೯ಸಲು ಅವಕಾಶ ಇದೆ.
ಶೋಭಾ ಹೆಗ್ಡೆಯವರಿಗೆ ಜೆಸ್ಸಿ ಟೀಚರ್ ಮಗ ಬೆ೦ಬಲ: ವೇಣೂರು ಅವಿಶ್ವಾಸ ಗೊತ್ತುವಳಿಯಲ್ಲಿ ಕಾ೦ಗ್ರೆಸ್ ಸದಸ್ಯರು ಸಮಪ೯ಕವಾಗಿ ಕಾಯ೯ನಿವ೯ಹಿಸಿದ್ದ ಅನೂಪ್ ಜೆ ಪಾಯಸ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದು ನನ್ನ ತಾಯಿ ಅಧ್ಯಕ್ಷ ಸ್ಥಾನಕ್ಕೆ ಸ್ಪಧಿ೯ಸಲ್ಲ ಕೊಟ್ಟ ಮಾತಿನಂತೆ ಶೋಭಾ ಹೆಗ್ಡೆಯವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.