ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನಲ್ಲಿ ಜುಲೈ 2 ರಂದು 2 ಕೊರೋನಾ ಕೇಸ್ ದೃಢ ಪಟ್ಟಿದೆ. ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರಾಯದ ನಿವಾಸಿ ಮಂಗಳೂರಿನಲ್ಲಿ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ (24ವ )ಜುಲೈ.2ರಂದು ಕೊರೋನಾ ಪಾಸಿಟಿವ್ ಬಂದಿದೆ. ಈತ ಜ್ವರದಿಂದ ಬಳಲುತ್ತಿದ್ದು 2 ಬಾರಿ ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ ಪಡೆದಿದ್ದು ನಂತರ ಇವರ ಗಂಟಲ ದ್ರವ ಪರೀಕ್ಷಿಸಿದ್ದು ಇವರ ವರದಿ ಪಾಸಿಟಿವ್ ಬಂದಿದೆ. ಅಳದಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರವು ಇಂದು ಸಂಪೂರ್ಣ ಸ್ಯಾನಿಟೈಸರ್ ಮಾಡಿಸಲಾಗಿದೆ. ಬರಾಯ ಮನೆಯಲ್ಲಿ 70, 65 ವರ್ಷ ಪ್ರಾಯದವರಿದ್ದು ಮನೆಯಲ್ಲಿ ಒಟ್ಟು 6 ಮಂದಿ ವಾಸವಾಗಿದ್ದು ಮನೆಯನ್ನು ಶೀಲ್ ಡೌನ್ ಮಾಡಲಾಗಿದೆ.
ಇನ್ನೋರ್ವ ಬಾರ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುತ್ತಿಲದ 33ವರ್ಷ ಪ್ರಾಯದ ಯುವಕ ಗಲ್ಫ್ ರಾಷ್ಟ್ರ ದಿಂದ ಜೂನ್ 26ಕ್ಕೆ ಆಗಮಿಸಿ ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸರಕಾರಿ ಕೊರಂಟೈನ್ ನಲ್ಲಿದ್ದ ಯುವಕನಿಗೆ ಕೊರೋನಾ ಪಾಸಿಟಿವ್ ಬಂದಿದೆ.