ಚಾರ್ಮಾಡಿ ಮುತ್ತಣ್ಣ ಶೆಟ್ಟಿ ನಿಧನ

Advt_NewsUnder_1
Advt_NewsUnder_1

ಚಾರ್ಮಾಡಿ ಗ್ರಾಮದ ರಕ್ತೇಶ್ವರಿ ಹಾರ್ಡ್‌ವೇರ್‍ಸ್‌ನ ಮಾಲಕ ಮುತ್ತಣ್ಣ ಶೆಟ್ಟಿ (90 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜೂ.1 ರಂದು ನಿಧನರಾದರು.

ಚಾರ್ಮಾಡಿ ಗ್ರಾಮದಲ್ಲಿ ಹಾರ್ಡ್‌ವೇರ್ ಸಂಸ್ಥೆಯನ್ನು ಪ್ರಾರಂಭಿಸಿ, ನಂತರದ ದಿನಗಳಲ್ಲಿ ಉದ್ಯಮವನ್ನು ಬೆಳೆಸುತ್ತಾ ಬಂದರು. ದೂರದ ಗ್ರಾಮಗಳಿಂದಲೂ ವ್ಯವಹಾರಕ್ಕೆ ಜನರು ಬರುತ್ತಿದ್ದರು. ‘ಚಾರ್ಮಾಡಿದ ಶೆಟ್ರೆನ ಅಂಗಡಿ’ ಎಂದೇ ಪ್ರಸಿದ್ಧಿಯಾಗಿತ್ತು. ಶೆಟ್ರು ಅಂದರೆ ಎಲ್ಲರಿಗೂ ಚಿರಪರಿಚಿತರು. ಸರಳ ಸಜ್ಜನಿಕೆಯ ಪ್ರಾಮಣಿಕರಾದ ಮುತ್ತಣ್ಣ ಶೆಟ್ಟಿಯವರು ಓರ್ವ ಪ್ರಗತಿಪರ ಕೃಷಿಕರಾಗಿದ್ದಾರೆ.

ಮೃತರು ಪತ್ನಿ ಶ್ರೀಮತಿ ರತ್ನ, ಪುತ್ರಿಯರಾದ ಶ್ರೀಮತಿ ಶಶಿಕಲ, ಶ್ರೀಮತಿ ಹೇಮಲತಾ, ಶ್ರೀಮತಿ ಗೀತಾ, ಶ್ರೀಮತಿ ನವೀನ ಹಾಗೂ ಪುತ್ರರಾದ ರವಿ, ಹರೀಶ್, ಉದಯ , ವಿಜಯ, ನಾಲ್ಕು ಹೆಣ್ಣು, ನಾಲ್ಕು ಗಂಡು ಮಕ್ಕಳು, ಸೊಸೆಯಂದಿರಾದ ಶ್ರೀಮತಿ ರೇಣುಕ, ಶ್ರೀಮತಿ ಪ್ರತಿಭಾ, ಶ್ರೀಮತಿ ಶರ್ಮಿಳಾ, ಶ್ರೀಮತಿ ಸುಕನ್ಯಾ, ಅಳಿಯಂದಿರು , ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.