ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಧೀಶರ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜೂ.30 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ, ಹೊಸದಾಗಿ ನಿಯುಕ್ತಿಗೊಂಡ ದ.ಕ ಜಿಲ್ಲೆಯ ಪ್ರಿನ್ಸಿಪಾಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮುರುಳೀಧರ್ ಪೈ.ಬಿ. ಇವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನ್ಯಾಯಾಲಯದ ಕಾರ್ಯ ಕಲಾಪ ಹಾಗೂ ಕೋವಿಡ್-19 ಇದರ ಮುಂಜಾಗೃತ ಕ್ರಮಗಳ ಬಗ್ಗೆ ವಿಚಾರಿಸಿ ಹೊಸ ವಕೀಲರ ಭವನದ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು. ಹಾಗೂ ನ್ಯಾಯಾಲಯದ ರಾಜಿ ಅರ್ಜಿ ಡಿಕ್ರಿಗಳ ಖಾತಾ ಬದಲಾವಣೆಯ ಪ್ರಕ್ರಿಯೆಗಳನ್ನು ಸಹಾಯಕ ಕಮೀಷನರ್ ಅವರು ವಜಾಗೊಳಿಸಿದ ಕುರಿತು ಅಧ್ಯಕ್ಷರು ಮನವರಿಕೆ ಮಾಡಿ ಈ ಕುರಿತು ಜಿಲ್ಲಾಧಿಕಾರಿಯವರಲ್ಲಿ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರು ಎಲೋಸಿಯನ್ ಎಸ್.ಲೋಬೊ, ಉಪಾಧ್ಯಕ್ಷರಾದ ವಸಂತ ಮರಕಡ, ಹಿರಿಯ ವಕೀಲರ ಸಂಘದ ಅಧ್ಯಕ್ಷರಾದ ರತ್ನವರ್ಮ ಬುನ್ನು, ಕೋಶಾಧಿಕಾರಿಯಾದ ಹರಿಪ್ರಸಾದ್, ಆಡಳಿತ ಮಂಡಳಿಯ ಸದಸ್ಯರಾದ ಅಶೋಕ್ ಕರಿಯನೆಲ ಮತ್ತು ಬದ್ರಿನಾಥ್ ಸಂಪಿಗೆತ್ತಾಯ ಮತ್ತು ಇತರ ನ್ಯಾಯವಾದಿಗಳು ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.