ವೇಣೂರು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಪದಗ್ರಹಣ ನೇರ ವೀಕ್ಷಣೆ ಕಾರ್ಯಕ್ರಮ

Advt_NewsUnder_1
Advt_NewsUnder_1

ವೇಣೂರು ವಲಯ ಕಾಂಗ್ರೆಸ್ಸ್ ಕಾರ್ಯಕರ್ತರಿಂದ ಡಿಕೆ ಶಿವಕುಮಾರ್ ಪ್ರಮಾನ ವಚನ ಝೂಮ್ ಆಪ್ ನ ಮೂಲಕ ನೇರ ಪ್ರಸಾರದ ವೀಕ್ಷಣೆಯ ಸಮಾರಂಭದ ಉದ್ಘಾಟನೆಯನ್ನು ಹಿರಿಯ ಕಾಂಗ್ರೇಸಿಗ ಜಯರಾಮ ಶೆಟ್ಟಿ ಖಂಡಿಗ ವೇಣೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಾತಾಡಿದ ಜಯರಾಮ್ ಶೆಟ್ಟಿಯವರು, ಡಿಕೆ ಶಿವಕುಮಾರ್ ಅದ್ಯಕ್ಷರಾಗಿ ಕಾರ್ಯ ಪ್ರವರ್ತರಾಗಿದ್ದರಿಂದ ಕಾಂಗ್ರೆಸ್ ಗೆ ಹೆಚ್ಚಿನ ಬಲ ಬಂದಿದೆ ಎಂದರಲ್ಲದೆ ಶುಭ ಹಾರೈಸಿದರು.

 

ಮುಖ್ಯ ಅಥಿತಿಯಾಗಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ಮಾತಾಡಿ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಾರಿ ಉತ್ಸಾಹದಿಂದಿದ್ದು  ಡಿಕೆ ಶಿವಕುಮಾರ್ ಕೆಪಿಸಿಸಿ ಅದ್ಯಕ್ಷರಾಗಿದ್ದರಿಂದ ಮತ್ತಷ್ಟು ಮೆರುಗನ್ನು ನೀಡಿದೆ ಎಂದರಲ್ಲದೆ ಕಾಂಗ್ರೆಸ್ ಸರಕಾರ ಮುಂದಿನ ದಿನಗಳಲ್ಲಿ ಬರಲಿದೆ ಎಂದರು.

ವೇಣೂರು ವಲಯ ಕಾಂಗ್ರೆಸ್ ಗೌರವ ಅದ್ಯಕ್ಷ ಪ್ರಭಾಕರ್ ಹೆಗ್ಡೆ ಸಭೆಯಲ್ಲಿ ಮಾತಾಡಿ ಶುಭ ಹಾರೈಸಿದರು.

ಪಂಚಾಯತ್ ಸದಸ್ಯರುಗಳಾದ ಸತೀಶ್ ಹೆಗ್ದೆ, ಉಸ್ತುವಾರಿ ಹರೀಶ್ ಪೊಕ್ಕಿ,ರೋನಾಲ್ಡ್, ವಿಕ್ಟರ್, ಕಸ್ತೂರಿ, ವಿಶಾಲಾಕ್ಷಿ, ಶಾರದ, ಶನಾಜ಼್, ರಾಜೇಶ್ ಪುಜಾರಿ, ಮಾಜಿ ಪಂಚಾಯತ್ಅ ದ್ಯಕ್ಷ  ದೇಜಪ್ಪ ಶೆಟ್ಟಿ, ಜ಼ಕೀರ್, ಮಾರ್ಕ್ ಪಿರೇರ, ಅರವಿಂದ ಶೆಟ್ಟಿ, ಇಸ್ಮಾಯಿಲ್ ಕೆ ಪೆರಿಂಜೆ, ಪ್ರದೀಪ್ ಪಿರೇರ ಸೇರಿಸಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅದ್ಯಕ್ಷ ಶಶಿಧರ ಶೆಟ್ಟಿ ಅದ್ಯಕ್ಷ ತೆ ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.