ಗುರುವಾಯನಕೆರೆ: ಕಳೆದ 7 ವರ್ಷಗಳಿಂದ ಗುರುವಾಯನಕೆರೆ ಬಂಟರ ಭವನದ ಸಮೀಪದಲ್ಲಿರುವ ಕಾಂಪ್ಲೆಕ್ಸ್ ವೊಂದರಲ್ಲಿ ಸಪ್ತಶ್ರೀ ಬ್ಯಾಟರಿ & ಪವರ್ ಸಿಸ್ಟಮ್ ಸಂಸ್ಥೆಯನ್ನು ಮುನ್ನಡೆಸಿ, ಇದೀಗ ಗ್ರಾಹಕರ ಹೆಚ್ಚಿನ ಬೇಡಿಕೆಯ ಮೇರೆಗೆ ಎಲ್ಲಾ ಗೃಹಬಳಕೆಯ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗುವ ನಿಟ್ಟಿನಲ್ಲಿಗುರುವಾಯನಕೆರೆಯ ಕಾರ್ಕಳ ರಸ್ತೆಯಲ್ಲಿರುವ V. L. R. S ಕಾಂಪ್ಲೆಕ್ಸ್ ನಲ್ಲಿ (ಭೂಷನ್ ಬಾರ್ ಎದುರುಗಡೆ) ” ವಿನ್ ಟ್ರೋನಿಕ್ಸ್ ” ಸಂಸ್ಥೆಯ ಉದ್ಘಾಟನ ಸಮಾರಂಭ ನಡೆಯಿತು.
ನೂತನ ಸಂಸ್ಥೆಯನ್ನು ಗುರುವಾಯನಕೆರೆ ಚಿಕಿತ್ಸಾ ಕ್ಲಿನಿಕ್ ನ ಡಾ. ವೇಣುಗೋಪಾಲ ಶರ್ಮ ಉದ್ಘಾಟಿಸಿ ಶುಭ ಹಾರೈಸಿದರು .ಮುಖ್ಯ ಅತಿಥಿಯಾಗಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ವಿ.ಎಲ್.ಆರ್,ಎಸ್ ಕಾಂಪ್ಲೆಕ್ಸ್ ಮಾಲಕ ವಲೇರಿಯನ್ ಡಿಸೋಜ, ಹಿರಿಯರಾದ ಡೊಂಬಯ್ಯ ಪೂಜಾರಿ ಉಪಸ್ಥಿತರಿದ್ದು ಸಂಸ್ಥಗೆ ಶುಭ ಕೋರಿದರು. ಬಂದಂತಹ ಅತಿಧಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಶ್ರೀಮತಿ ಅರುಣ ಮತ್ತು ಜಯರಾಜ್ ನಡಕ್ಕರ ಸ್ವಾಗತಿಸಿ, ಸತ್ಕರಿಸಿದರು.