ಬೆಳ್ತಂಗಡಿ: ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ನಗರ ಮತ್ತು ಗ್ರಾಮೀಣ ಘಟಕದ ಆಶ್ರಯದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ಪ್ರತಿಜ್ಞಾ ನಿಧಿ ಕಾರ್ಯಕ್ರಮಕ್ಕೆ ಜು.2 ರಂದು ಬೆಳ್ತಂಗಡಿ ಸಿ.ವಿ.ಸಿ ಹಾಲ್ ಸಭಾಂಗಣದಲ್ಲಿ ಮಾಜಿ ಶಾಸಕ ಕೆ ವಸಂತ ಬಂಗೇರ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೇಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ, ಕೆಪಿಸಿಸಿ ವೀಕ್ಷಕರಾದ ಕೃಷ್ಣಮೂರ್ತಿ, ಹರೀಶ್ ಕಿಣಿ, ಮುಖಂಡರಾದ ಅಭಿನಂದನೆ ಹರೀಶ್ ಕುಮಾರ್ ಜಿ.ಪಂ ಸದಸ್ಯ ಶಾಹುಲ್ ಹಮೀದ್, ಜೆಸಿಂತಾ ಮೊನಿಸ್, ಲಾರೆನ್ಸ್ ಡಿಸೋಜ, ಎನ್ ಲಕ್ಷ್ಮಣ ಗೌಡ, ಭರತ್ ಕುಮಾರ್, ತೆರೆಸಾ ಲೊಬೋ, ಕಿಶೋರ್ ವಳಂಬ್ರ, ಬಿ.ಕೆ ವಸಂತ್, , ರಮೇಶ್ ಪೂಜಾರಿ ಅಂಬರೀಷ್ ಸುವಣ೯ ಮಹಮ್ಮದ್ ಕುಂಞ ಮೊದಲಾದವರು ಉಪಸ್ಥಿತರಿದ್ದರು