ಅಪ್ರಾಪ್ತ ಬಾಲಕಿಯ ಅಪಹರಿಸಿ ಮದುವೆಯ ಆರೋಪ;ಬಂಧಿತ ಆರೋಪಿಯ ಕೊರೊನಾ ಪರೀಕ್ಷೆ ವರದಿ ಪಾಸಿಟಿವ್

ಪೋಕ್ಸೋ ಕಾಯ್ದೆಯಡಿ ಯುವಕನ ಬಂಧನ
ಬಂಧಿತ ಆರೋಪಿಯ ಕೊರೊನಾ ಪರೀಕ್ಷೆ ವರದಿ ಪಾಸಿಟಿವ್ : ಆರೋಪಿ ಕೋವಿಡ್ ಆಸ್ಪತ್ರೆಗೆ ಶಿಫ್ಟ್
ಪೋಲೀಸ್ ಠಾಣೆ ಸಿಬ್ಬಂದಿ ಸೇರಿ ಹಲವರಿಗೆ ಕ್ವಾರಂಟೈನ್

ಧರ್ಮಸ್ಥಳ: ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ದೇವಸ್ಥಾನವೊಂದರಲ್ಲಿ ಮದುವೆಯಾದ ಯುವಕನ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.೨೮ ರಂದು ಪೋಕ್ಸೋ ಕಾಯಿದೆಯನ್ವಯ ಕೇಸು ದಾಖಲಿಸಿಕೊಳ್ಳಲಾಗಿದೆ.

ಯುವಕನ ಬಂಧನ

ಘಟನೆಗೆ ಸಂಬಂಧಿಸಿ ಬಾಲಕಿಯ ಮನೆಯವರು ಪೋಲೀಸರಿಗೆ ದೂರು ನೀಡಿದ್ದು ತಮ್ಮ ಮಗಳನ್ನು ಕಿಡ್ನಾಪ್ ಮಾಡಿ, ಮದುವೆಯಾಗಲು ಯತ್ನಿಸಿದ್ದಾನೆಂದು ದೂರು ನೀಡಿದರು. ಈ ದೂರಿನ ಹಿನ್ನಲೆಯಲ್ಲಿ ಪೋಲೀಸರು ಪೋಕ್ಸೋ, ಬಾಲ್ಯ ವಿವಾಹ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದರು. ಬಳಿಕ ಆತನನ್ನು ಆನ್‌ಲೈನ್ ಪ್ರಕ್ರಿಯ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಆದರೆ ಅದಕ್ಕಿಂತ ಮೊದಲು ಕೊರೊನಾ ಪರೀಕ್ಷೆ ಆಗಬೇಕೆಂದು ನ್ಯಾಯಾಲಯದ ಆದೇಶದಂತೆ ಆರೋಪಿ ಆರೋಪಿಯ ಗಂಟಲ ದ್ರವವನ್ನು ಆರೋಗ್ಯಾಧಿಕಾರಿಯವರ ಮೂಲಕ ತೆಗೆಸಿ ಪರೀಕ್ಷೆಗೆ ಕಳುಹಿಸಲಾಯಿತು. ಜು.1ರಂದು ಈ ಪರೀಕ್ಷಾ ವರದಿ ಬಂದಾಗ ಆರೋಪಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಯಿತು. ಬಳಿಕ ಕಾನೂನು ಪ್ರಕ್ರಿಯೆ ನಡೆಸಿ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತೆಂದು ತಿಳಿದು ಬಂದಿದೆ.

ಹುಡುಗ, ಹುಡುಗಿಯ ಮನೆಯವರು ಸೇರಿ ಹಲವರಿಗೆ ಕ್ವಾರಂಟೈನ್
ಕೊರೊನಾ ಪಾಸಿಟಿವ್ ಬಂದಿರುವುದರಿಂದ ಪೋಲೀಸ್ ಠಾಣೆಯ 5 ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಿಸಲಾಗಿದೆಯಲ್ಲದೆ, ಠಾಣೆಯಲ್ಲಿ ಸ್ಯಾನೀಟೈಸೇಶನ್ ಮಾಡಲಾಗಿದೆ. ಅಲ್ಲದೆ ಕಿರಣ ಹಾಗೂ ಆ ಹುಡುಗಿಯ ಮನೆಯವರನ್ನು ಕೂಡಾ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.