ಜು.2: ಗುರುವಾಯನಕೆರೆಯಲ್ಲಿ ವಿನ್ ಟ್ರೋನಿಕ್ಸ್ ಶುಭಾರಂಭ

Advt_NewsUnder_1
Advt_NewsUnder_1

ಗುರುವಾಯನಕೆರೆ: ಕಳೆದ 7 ವರ್ಷಗಳಿಂದ ಗುರುವಾಯನಕೆರೆ ಬಂಟರ ಭವನದ ಸಮೀಪದಲ್ಲಿರುವ ಕಾಂಪ್ಲೆಕ್ಸ್ ವೊಂದರಲ್ಲಿ ಸಪ್ತಶ್ರೀ ಬ್ಯಾಟರಿ & ಪವರ್ ಸಿಸ್ಟಮ್ ಸಂಸ್ಥೆಯನ್ನು ಮುನ್ನಡೆಸಿ, ಇದೀಗ ಗ್ರಾಹಕರ ಹೆಚ್ಚಿನ ಬೇಡಿಕೆಯ ಮೇರೆಗೆ ಎಲ್ಲಾ ಗೃಹಬಳಕೆಯ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗುವ ನಿಟ್ಟಿನಲ್ಲಿ ಜು 2ರಂದು ಗುರುವಾಯನಕೆರೆಯ ಕಾರ್ಕಳ ರಸ್ತೆಯಲ್ಲಿರುವ V. L. R. S ಕಾಂಪ್ಲೆಕ್ಸ್ ನಲ್ಲಿ (ಭೂಷನ್ ಬಾರ್ ಎದುರುಗಡೆ) ಸಹ ಸಂಸ್ಥೆ ” ವಿನ್ ಟ್ರೋನಿಕ್ಸ್ ” ಸಂಸ್ಥೆಯ ಶುಭಾರಂಭ ನಡೆಯಲಿದೆ.

ನೂತನ ಸಂಸ್ಥೆಯನ್ನು ಗುರುವಾಯನಕೆರೆ ಚಿಕಿತ್ಸಾ ಕ್ಲಿನಿಕ್ ನ ಡಾ. ವೇಣುಗೋಪಾಲ ಶರ್ಮ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ವಿ.ಎಲ್.ಆರ್,ಎಸ್ ಕಾಂಪ್ಲೆಕ್ಸ್ ಮಾಲಕ ವಲೇರಿಯನ್ ಡಿಸೋಜ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ಅರುಣ ಮತ್ತು ಜಯರಾಜ್ ನಡಕ್ಕರ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.