ಬೆಳ್ತಂಗಡಿ: ಇಲ್ಲಿನ ಮೆಸ್ಕಾಂ ಇಲಾಖೆಯ ಸಹಾಯಕ ಲೆಕ್ಕಾಧಿಕಾರಿಯಾಗಿ (A.A.O) ಬುಶ್ರಾ ಅಬೂಬಕ್ಕರ್ ಪೆರಿಂಜೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
2017 ರಲ್ಲಿ ಮೆಸ್ಕಾಂ ಇಲಾಖೆ ಮಂಗಳೂರು ಕಾರ್ಪೊರೇಟ್ ಕಚೇರಿಯಲ್ಲಿ ಎ.ಎ.ಒ ಆಗಿ ಅಧಿಕಾರ ವಹಿಸಿಕೊಂಡ ಅವರು ಇದೀಗ ವರ್ಗಾವಣೆಗೊಂಡು ಬೆಳ್ತಂಗಡಿ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪೆರಿಂಜೆಯ ದಿ.ಇಬ್ರಾಹಿಂ ಕೆ ಮತ್ತು ಸಾರಮ್ಮ ದಂಪತಿಯ ಪುತ್ರಿಯಾಗಿರುವ ಬುಶ್ರಾ ಅವರು ಪದವಿ ಬಳಿಕ ಎಂ.ಕಾಂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ್ದಾರೆ. ಬಳಿಕ ವೇಣೂರು ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ಮೂರು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಅನುಭವಪಡೆದಿದ್ದಾರೆ.
ಆ ಬಳಿಕ ಮೆಸ್ಕಾಂ ಇಲಾಖೆಯ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅವರು ಎ.ಒ.ಒ ಆಗಿ ನೇಮಕಗೊಂಡರು.
ವಿವಾಹಿತರಾಗಿರುವ ಅವರ ಪತಿ ಅಬೂಬಕ್ಕರ್ ಅವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.