ಶಿಶಿಲ: ಸಮಾನ ಮನಸ್ಕ ಗ್ರಾಮಸ್ಥರಿಂದ ಶ್ರಮದಾನ

ಶಿಶಿಲ: ಚೀನಾ ಗಡಿಯಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪನೆ ಹಾಗೂ ನಮ್ಮ ದೇಶದ ಗಡಿಗಳನ್ನು ಕಾಯುವ ಯೋಧರಿಗೆ ಗೌರವ ನೀಡುವ ಕಾರ್ಯಕ್ರಮದಲ್ಲಿ ಶಿಶಿಲದ ಸಮಾನ ಮನಸ್ಕ ಗ್ರಾಮಸ್ಥರು ಜೂ.28ರಂದು ಹಮ್ಮಿಕೊಂಡಿದ್ದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನಲ್ಲಿ ಲ್ಯಾನ್ಸ್  ಆಗಿ ಯುದ್ಧದ ಮುಂಚೂಣಿಯಲ್ಲಿದ್ದು ಪಾಕಿಸ್ಥಾನದ ವಿರುದ್ಧ ಹೋರಾಡಿದ ಶಿಶಿಲ ಗ್ರಾಮದ ಪ್ರಸನ್ನ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಶಿಶಿಲದ ಜನತೆ ಸೈನಿಕರಿಗೆ ಸಲ್ಲಿಸಿದ ಗೌರವವನ್ನು ಶ್ಲಾಘಿಸಿದರು. ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಉದಯಶಂಕರ್ ಕೆ. ಕಾರ್ಯಕ್ರಮ ನಿರೂಪಿಸಿದರು. ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು. ಈ ಸಂದರ್ಭ ಧರ್ಮಸ್ಥಳ ಕ್ಷೇತ್ರದ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ್ ಅಗಮಿಸಿದ್ದರು.

ನಂತರ ಶಿಶಿಲ -ಅರಸಿನಮಕ್ಕಿ 8 ಕಿ.ಮೀ ಅಂತರದ ರಸ್ತೆಯು ಅನೇಕ ತಿರುವುಗಳಿಂದ ಕೂಡಿದ್ದು, ರಸ್ತೆಯು ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಯನ್ನು ಮುಚ್ಚುವ ರೀತಿಯಲ್ಲಿ ಅಪಾಯಕಾರಿಯಾಗಿ ಬೆಳೆದಿದ್ದು ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ, ಶಿಶಿಲಕ್ಕೆ ಆಗಮಿಸುವ ಅನ್ಯ ಊರಿನ ಪ್ರವಾಸಿಗರಿಗೆ ಆಡಚಣೆಯುಂಟಾಗುತ್ತಿದ್ದು, ಇದರಿಂದ ಅವಘಡಗಳು ಉಂಟಾಗುವ ಸಾಧ್ಯತೆಯನ್ನು ಮನಗಂಡ ಗ್ರಾಮಸ್ಥರು ಶ್ರಮದಾನದ ಮೂಲಕ ಅಪಾಯಕಾರಿ ಗಿಡಗಂಟಿಗಳನ್ನು ಕತ್ತರಿಸಿ, ರಸ್ತೆ ಹೊಂಡಗಳನ್ನು ಮುಚ್ಚಿ, ರಸ್ತೆಬದಿಯಲ್ಲಿರುವ ಪ್ಲಾಸ್ಟಿಕ್ ಮತ್ತು ಬಾಟಲಿಗಳನ್ನು ಸ್ವಚ್ಛಗೊಳಿಸಿ ಇತರ ಗ್ರಾಮಗಳಿಗೆ ಮಾದರಿಯಾಗುವಂತೆ ತಮ್ಮ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಿದ್ದಾರೆ. ಈ ಸಂದರ್ಭದಲ್ಲಿ 50-75 ಶಿಶಿಲ ಗ್ರಾಮಸ್ಥರು ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.