HomePage_Banner_
HomePage_Banner_

ನಾಳ ವ್ಯವಸ್ಥಾಪನಾ ಸಮಿತಿ ರಚನೆ,ಭಕ್ತಾದಿಗಳ ಸಭೆ

ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಯ ಸಮಾಲೋಚನಾ ಸಭೆ ಜೂ.28 ರಂದು ಪೂರ್ವಾಹ್ನ ದೇವಸ್ಥಾನದ ಆನ್ನ ಛತ್ರ ಸಭಾಂಗಣದಲ್ಲಿ ನಡೆಯಿತು.

ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ವಸಂತ ಮಜಲು ವಹಿಸಿದ್ದರು.ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೆ ಸರಕಾರದಿಂದ ಬಂದಿರುವ ಸುತ್ತೋಲೆಯನ್ನು ದೇವಸ್ಥಾನದ ವ್ಯವಸ್ಥಾಪಕ ಗಿರೀಶ್ ಶೆಟ್ಟಿ ಸಭೆಯಲ್ಲಿ ವಾಚಿಸಿದರು.ನೂತನ ವ್ಯವಸ್ಥಾಪನಾ ಸಮಿತಿಗೆ 9 ಸದಸ್ಯರನ್ನು ಬೆಳ್ತಂಗಡಿ ಶಾಸಕರ ಶಿಫಾರಸ್ಸು ಮೇರೆಗೆ ಸೂಚಿಸಿ ಸರಕಾರದ ಅನುಮೋದನೆಗೆ ಕಳುಹಿಸಿ ಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.ನ್ಯಾಯತರ್ಫು, ಕಳಿಯ ಮತ್ತು ಓಡಿಲ್ನಾಳ ಭಕ್ತಾಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಸ್ವಾಗತಿಸಿ, ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.